ಮದುವೆಯಾಗುವುದು ಸರಿನೋ? ತಪ್ಪೋ?
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಭಯೋತ್ಪಾದನೆ ಪಾಕಿಸ್ತಾನಕ್ಕೆ ಒಂದು ಉದ್ಯಮ. ಭಾರತಕ್ಕೆ?
ತಲೆನೋವು.
ಫ್ಯಾಷನ್ ಡಿಸೈನರ್ ಮಧು, 9945737427
ದಿನಕ್ಕೆ ಎರಡು ಬಾರಿ 'ಲಕ್ಸ್' ಸೋಪ್ನಿಂದ ಸ್ನಾನ ಮಾಡಿದ್ರೂ, ನನ್ನ ಪ್ರೇಯಸಿಗೆ 'ಕತ್ರಿನಾ ಕೈಫ್'ಳ ಸೌಂದರ್ಯ ಬರುತ್ತಿಲ್ವಲ್ಲಾ?
ಆಕೆ ನಿಮ್ಮ ಕಿಸೆಯ ಪಾಲಿಗೆ ನಿಜವಾಗಿಯೂ 'ಕತ್ರಿ'ನಾ ಕೈಫ್!
ತಲವಾಟ ಮಂಜುನಾಥ, ಸಾಗರ, 9480931611
ಮದುವೆಯಾಗುವುದು ಸರಿನೋ? ತಪ್ಪೋ?
ಮದುವೆಯಾದವರ ಪ್ರಕಾರ ತಪ್ಪು. ಆಗದವರ ಪ್ರಕಾರ ಸರಿ!
ರವಿಕುಮಾರ ಜಿ.ಬಿ. 9449669897
ವಾಟಾಳ್ ನಾಗರಾಜ ಅವರ ಕಪ್ಪು ಕನ್ನಡಕ, ಟೋಪಿ ಹಿಂದಿರುವ ಗುಟ್ಟೇನು?
ಅದನ್ನು ತೆಗೆದರೆ ತಾನೇ ಅದರ ಹಿಂದಿರುವ ಗುಟ್ಟು ಗೊತ್ತಾಗೋದು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮದುವೆಯಾದವನ ಬಾಳು ಮೊದಲು ಶೃಂಗಾರಮಯ. ಆಮೇಲೆ?
ಬಂಗಾರಮಯ!
-ಬಾಣಭಟ್ಟ