ಪ್ರೇಮಕ್ಕೆ ಕಣ್ಣಿಲ್ಲವಂತೆ. ಪ್ರೇಮಿಸುವವರಿಗೆ?
ಚಿರಪ್ರಭ ನಂಜನಗೂಡು, 8553793107
ಸರ್ಕಾರದ ಯೋಜನೆಗಳು ದೌರ್ಭಾಗ್ಯದ ಯೋಜನೆಗಳಾಗುತ್ತಿವೆಯಲ್ಲಾ?
ಮತಭಾಗ್ಯ ಯೋಜನೆಗಳಾಗುವ ಬದಲು ಹತಭಾಗ್ಯ ಯೋಜನೆಗಳಾಗುತ್ತಿವೆ.
ಓಂಚನ್ನೇಶ ಅರಬಿಳಚಿಕ್ಯಾಂಪ್, ಭದ್ರಾವತಿ
ಪ್ರೇಮಕ್ಕೆ ಕಣ್ಣಿಲ್ಲವಂತೆ. ಪ್ರೇಮಿಸುವವರಿಗೆ?
ಕಣ್ಣಿದ್ದರೂ ಮುಚ್ಚಿರುತ್ತದೆ!
ವಿನುತ ಮತ್ತು ಗೆಳತಿಯರು, ಬೆಂಗಳೂರು
ಫ್ಯಾಷನ್ ಡಿಸೈನರ್ ಮಧು ಪ್ರೀತಿ-ಪ್ರೇಮ-ಪ್ರಣಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳುತ್ತಾರಲ್ಲ. ಏನಿದರ ರಹಸ್ಯ?
ಅದು ಅವರ ಫ್ಯಾಷನ್.
ರಮೇಶ ಭಟ್ ಆವರ್ಸೆ, ಮೈಸೂರು, 9164276058
ನಮ್ಮ ಪ್ರಧಾನಿ ಬಳಿ ಸ್ವಂತದ ಮೊಬೈಲ್ ಇಲ್ವಂತೆ?
ಬಡ ದೇಶದ ಬಡ ಪ್ರಧಾನಿ ಬಿರುದು ಕೊಡಬಹುದು.
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಕಾಣದ ದೇವರನ್ನು ನಂಬುವುದು ಮೂಢನಂಬಿಕೆಯಾದರೆ ಕೈಕೊಡುವ ರಾಜಕಾರಣಿಗಳನ್ನು ನಂಬುವುದು?
ನಮ್ಮ ಹಣೆಬರಹ.
-ಬಾಣಭಟ್ಟ