ಕೋಲ್ಯ ಕಸ್ಟಮರ್ ಕೇರ್ಗೆ ಕರೆ ಮಾಡಿದ.
ಹುಡುಗಿ: ಹಲೋ. 'ಹೇರ್'ಟೆಲ್ಗೆ ನಿಮಗೆ ಸ್ವಾಗತ...ಏನು ಸಹಾಯಬೇಕಿತ್ತು?
ಕೋಲ್ಯ: ಮೇಡಂ ನನ್ನ ಮದುವೆ ಆಗ್ತೀರಾ?
ಹುಡುಗಿ: ಏನು ಮಾತಾಡ್ತಾ ಇದೀರಾ ಸಾರ್?
ಕೋಲ್ಯ: ಪ್ಲೀಸ್ ಮದುವೆ ಆಗಿ, ಹನಿಮೂನ್ಗೆ ಶ್ರೀಲಂಕಾಗೆ ಕರ್ಕೊಂಡು ಹೋಗ್ತೀನಿ..
ಹುಡುಗಿ: ಸರ್ ನನಗೆ ಮದುವೆ ಆಗೋದಕ್ಕೆ ಇಷ್ಟ ಇಲ್ಲ...
ಕೋಲ್ಯ: ಯಾವಾಗ ಆಗೋಣ ಮದುವೆ? ನಾಳೆ ಸಂಜೆ 7 ಗಂಟೆಗೆ?
ಹುಡುಗಿ: ಸರ್ ಅರ್ಥ ಮಾಡ್ಕೊಳ್ಳಿ ನನಗೆ ಇಷ್ಟ ಇಲ್ಲ.
ಕೋಲ್ಯ: ಈಗ ಅರ್ಥ ಆಯ್ತಾ ಮೇಡಂ ನಮ್ಮ ಕಷ್ಟ ನಿಮಗೆ?! ನಮಗೆ ಇಷ್ಟ ಇಲ್ಲ ಅಂದ್ರೂ ಪದೇ ಪದೇ ಫೋನ್ ಮಾಡಿ ಕಿರಿಕಿರಿ ಮಾಡ್ತಾನೇ ಇರ್ತೀರ....?!
-
ಬೋರಾಗುತ್ತಿದೆಯೇ?
ಜೀವನದಲ್ಲಿ ಸ್ವಲ್ಪ ಮಜಾ ಮಾಡಬೇಕು ಎಂದನಿಸುತ್ತಿದೆಯೇ?
ಹಾಗಿದ್ದರೆ ಅಪರಿಚಿತರ ಮದುವೆಗೆ ಹೋಗಿ, ಜೋರಾಗಿ ಕೂಗಿ- "ಮದುವೆ ಆಗಬೇಡ, ನಾನು ಈಗ್ಲೂ ನಿನ್ನ ಪ್ರೀತಿಸ್ತೀನಿ!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.