ಹುಟ್ಟಿಗೂ ಸಾವಿಗೂ ವ್ಯತ್ಯಾಸ ಏನು?
ಕಾಳೀಹುಂಡಿ ಶಿವಕುಮಾರ್, ಮೈಸೂರ್, 9844883581
ಹೆಂಡತಿಯ ಆಸೆಯನ್ನು ನಿಯಂತ್ರಿಸುವ ಸಾಧನ ಬಂದಿದೆಯಂತೆ ನಿಜವೇ?
ಆ ಸಾಧನವನ್ನು "ನಿಮ್ಮ ಭ್ರಮೆ" ಎನ್ನಬಹುದಾ?!
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ
ಹೊತ್ತಿಲ್ಲದ ಹೊತ್ತಲ್ಲಿ ಬರುವ ದಾಸಯ್ಯನಿಗೆ ತುತ್ತು ನೀಡುವವರೇ ಇಲ್ಲವಾಗಿದ್ದಾರಲ್ಲ?
ಪಾತ್ರೆ ತೊಳೆಯುವ ಸಮಯಕ್ಕೆ ಬಂದು ಪಾಯಸ ಕೇಳಿದೊಡೆಂತಯ್ಯ?
ಶ್ರೀಧರ್ ಡಿ. ರಾಮಚಂದ್ರ, ಚಿತ್ರದುರ್ಗ, 9880791106
ಹುಟ್ಟಿಗೂ ಸಾವಿಗೂ ವ್ಯತ್ಯಾಸ ಏನು?
ಮೊದಲನೆಯದಕ್ಕೆ ಸಂಭ್ರಮ- ಎರಡನೆಯದಕ್ಕೆ ಸಂತಾಪ!
ಬರ್ಕಲಿ ರಮೇಶ ಕಿರಗಂದೂರು, ಮಂಡ್ಯ
ನನ್ನನ್ನು ಕಂಡಾಗಲೆಲ್ಲ ಆಕೆ "ಎಲ್ಲಿಂದಲೋ ನೀ ಎದುರಿಗೆ ಬಂದೆ" ಎಂದು ಹಾಡುತ್ತಾಳಲ್ಲ?
ನೀನು, "ಮಂಡ್ಯದಿಂದ ಓಡಿಬಂದ" ಹಾಡು ಹೇಳಿ ಉತ್ತರಿಸು!
ವಿ. ಹೇಮಂತ ಕುಮಾರ, ಬೆಂಗಳೂರು
ಬೈಕು ಓಡಿಸುವಾಗ ಸೊಂಟ ಹಿಡಿದರೆ ಲವ್ ಆಗುತ್ತಾ?
ಆಕ್ಸಿಡೆಂಟ್ ಆಗುತ್ತೆ!
-ಬಾಣಭಟ್ಟ