ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕ್ರಾಂತಿಕಾರಕ ಹೆಜ್ಜೆ

Srinivasa Murthy VN
Updated On : 14 Oct 2013, 9:47 am

ಕುದ್ರೋಳಿಯ ದೇವಾಲಯದಲ್ಲಿ ವಿವಿಧ ದೇವತಾ ಮೂರ್ತಿಗಳಿಗೆ ಪೂಜೆ ಮಾಡುವ ಅವಕಾಶವನ್ನು ವಿಧವಾ ಸ್ತ್ರೀಯರಿಗೆ ನೀಡಿರುವುದು ಈ ಯುಗಮಾನದ ಮಹತ್ವದ ಹೆಜ್ಜೆ ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನೀಯರು. ಎಷ್ಟೋ ದೇವಾಲಯಗಳಿಗೆ ಸ್ತ್ರೀಯರ ನಿರ್ಬಂಧ ಇರುವ ನಾಡಿನಲ್ಲಿ ಪೂಜೆಗೆ ಅವಕಾಶ ಮಾಡಿದ್ದು ಸಾಮಾನ್ಯ ವಿದ್ಯಮಾನವಲ್ಲ.
ಕುದ್ರೋಳಿಯ ಈ ಬೆಳಕು ದೇಶದ ಎಲ್ಲೆಡೆ ಜ್ಞಾನದ, ಹೊಸ ಮನ್ವಂತರದ ಶಕ್ತಿಯಾಗಿ ಹರಡಲಿ. ಹಾಗೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡುವ ಮೂಲಕ ಹಲವು ರಾಜಕಾರಣಿಗಳಲ್ಲಿ, ಪ್ರಬಲವಾಗಿದ್ದ ಮೌಢ್ಯಕ್ಕೆ ಪೆಟ್ಟು ಕೊಟ್ಟಿದ್ದಾರೆ. ಜಾತಿ, ಮತಗಳಲ್ಲಿ ಮೇಲು-ಕೀಳು ಎಣಿಸುತ್ತಿದ್ದ ಕೆಲವು ಕುತ್ಸಿತ ಮನಸ್ಸುಗಳು ಪ್ರದೇಶ, ಪರಿಸರವನ್ನೂ ಕೇಡಿನ ನೆಲೆಯಲ್ಲಿ ಗುರುತಿಸಿ, ಸಾಮಾನ್ಯರಲ್ಲಿ ಅಧೀರತೆ ಉಂಟು ಮಾಡುವ ಸಣ್ಣತನ ಇನ್ನಾದರೂ ನಿಲ್ಲುವಂತಾಗಲಿ.
-ಟಿ. ಗೋವಿಂದರಾಜು, ಬೆಂಗಳೂರು
'ದೇವಕಣ'- ದೈವಲೀಲೆ!
'ದೇವಕಣ'ಕ್ಕಾಗಿ ಹಿಗ್ಸ್- ಎಂಗ್ಲರ್ಟ್‌ರಿಗೆ ನೊಬೆಲ್ ಪ್ರಶಸ್ತಿ ಇಂದು
ಸತ್ಯೇಂದ್ರನಾಥ ಬೋಸ್‌ಗೆ ಸಿಗಲಿಲ್ಲ ಈ ಪ್ರಶಸ್ತಿ ಅಂದು
'ದೇವಕಣ'ವನ್ನೇನೋ ಕಂಡು ಹಿಡಿದರು ಮಾನವರು
ಆದರೆ, ದೈವಲೀಲೆಯನ್ನು ಯಾರು ತಾನೇ ಬಲ್ಲರು?
-ಎಚ್. ಆನಂದರಾಮಶಾಸ್ತ್ರೀ, ಬೆಂಗಳೂರು

ಭೇಷ್ ಮುಖರ್ಜಿ!

ಕಳಂಕಿತರನ್ನು ಉಳಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ಸಹಿ ಹಾಕದೆ ಮರಳಿಸಿ ತಮ್ಮ ಹುದ್ದೆಗೆ ಗೌರವ ತಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಸ್ಥೈರ್ಯವನ್ನು ಮೆಚ್ಚಲೇಬೇಕು. ರಾಷ್ಟ್ರಪತಿ ಹುದ್ದೆಯಲ್ಲಿ ಇದ್ದ ಹಲವು ಮಹಾನುಭಾವರು ರಬ್ಬರ್ ಸ್ಟ್ಯಾಂಪ್ ಆಗಿದ್ದರು. ತಾವು ಹಾಗಾಗಾದೆ ಕಠಿಣ ನಿರ್ಧಾರ ತೆಗೆದುಕೊಂಡು ದೇಶಕ್ಕೆ ಕಂಟಕರಾಗಿ ಸರ್ಕಾರದ ಖಜಾನೆಗೆ ಭಾರವಾಗಿದ್ದ ಉಗ್ರರಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ನಾನು ಎಲ್ಲರಂತೆ ಅಲ್ಲ ಎಂಬುದನ್ನು ತೋರಿಸಿದರು.
ಸ್ವಾಭಿಮಾನಿಗಳನ್ನು ಮೂಲೆಗುಂಪು ಮಾಡುವ ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆಯಾಗಲಿ.
-ಅರವಿಂದ. ವಿ. ಜಗ್ಗಿನವರ, ಬೆಳಗಾವಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement