ನಿನ್ನೆ ರಾತ್ರಿ ಒಂದು ಕನಸು ಕಂಡೆ.
ಹೆಂಡತಿ- ನಿನ್ನೆ ರಾತ್ರಿ ಒಂದು ಕನಸು ಕಂಡೆ. ಅದರಲ್ಲಿ ನೀವು ನಂಗೆ ಡೈಮಂಡ್ ನೆಕ್ಲೆಸ್ ಕೊಡಿಸ್ತಾ ಇದ್ರಿ...
ಗಂಡ- ಬಹಳ ಒಳ್ಳೇದು. ಇವತ್ತು ರಾತ್ರಿ ಮಲಗಿದಾಗ ಆ ನೆಕ್ಲೆಸ್ ಧರಿಸಿ ಸಂಭ್ರಮ ಪಟ್ಟಂತೆ ಕನಸು ಕಾಣು.
---
ಕೋಲ್ಯ- ಡಾಕ್ಟ್ರೇ... ಅರ್ಜೆಂಟಾಗಿ ನನ್ನ ಕಣ್ಣು ಚೆಕ್ಅಪ್ ಮಾಡಿಸಿಕೋಬೇಕು ಅನ್ನಿಸ್ತಿದೆ...
ಈತ- ಅಗತ್ಯವಾಗಿ ನೀವು ದೃಷ್ಟಿ ಚೆಕ್ಅಪ್ ಮಾಡಿಸಿಕೊಳ್ಳಬೇಕು. ಏಕೆಂದರೆ ನೀವು ಬಂದಿರುವುದು ರೆಸ್ಟೊರೆಂಟ್ಗೆ, ಕ್ಲಿನಿಕ್ಗಲ್ಲ!
---
ಜಡ್ಜ್- ನೀನು ಈ ವ್ಯಕ್ತಿಯಿಂದ ಹಣ ಕದ್ದಿರುವುದನ್ನು ಒಪ್ಪಿಕೊಳ್ತೀಯಾ?
ಆರೋಪಿ- ಇಲ್ಲ ಸಾರ್. ಅವರಾಗೇ ಹಣ ಕೊಟ್ರು.
ಜಡ್ಜ್- ಹೌದಾ! ಯಾವಾಗ?
ಆರೋಪಿ- ನಾನು ಅವರನ್ನು ಅಡ್ಡಗಟ್ಟಿ ಚಾಕು ತೋರ್ಸಿದೆನಲ್ಲ, ಆವಾಗ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.