ಶ್ರೀ ಸಿಹಿಯೇ ನಮಃ
ಮೈಸೂರು ಪಾಕ್ ರಾಜ್ಯದ ಜಹಂಗೀರ್ ಜಿಲ್ಲಾ ಪೇಡಾ ತಾಲೂಕಿನ ಸಿರಾ ಗ್ರಾಮದ ನಿವಾಸಿ ಬೇಸನ್ ಲಾಡು ಅವರ ಪುತ್ರ "ಚಿ.ರಾ. ಬಾದುಶಾ" ಹಾಗೂ "ಚಿ.ಸೌ. ಚಂಪಾಕಲಿ"( ಶ್ರೀಮತಿ ಚಂಚಂ ಹಾಗೂ ಶ್ರೀ ರವೆಉಂಡೇಸ್ವಾಮಿ ಅವರ ಪುತ್ರಿ) ಇವರ ಶುಭ ವಿವಾಹವನ್ನು ಪಕೋಡಾ ಜಿಲ್ಲೆಯ ಕೇಸರೀಭಾತ್ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳ ಸಿಹಿವಾರದಂದು, ಚಿರೋಟಿ ಮುಹೂರ್ತದಲ್ಲಿ ನೆರವೇರಿಸಲು ಗುರುಹಿರಿಯರು ನಿಶ್ಚಯಿಸಿರುತ್ತಾರೆ. ತಾವು ಸಕುಟುಂಬ ಸಪರಿವಾರ ಸಮೇತರಾಗಿ ಆಗಮಿಸಿ ಹೊಟ್ಟೆ ತುಂಬ ಊಟ ಮಾಡಿ ವಧುವರರನ್ನು ಆಶೀರ್ವದಿಸಿ, ಮನೆಗೆ ಹೋಗಬೇಕಾಗಿ ಸವಿನಯ ಪ್ರಾರ್ಥನೆ. ತಮ್ಮ ಸುಖಾಗಮನ ಬಯಸುವವರು ಶ್ರೀಮತಿ ಅವಲಕ್ಕಿ ಮತ್ತು ಬೇಸನುಂಡೆ, ರವಾ ಉಪ್ಪಿಟ್ಟು ಹಾಗೂ ಸಕಲ ಸಿಹಿ ತಿಂಡಿ ಬಳಗ.
ವಿಶೇಷ ಸೂಚನೆ: ಮನೆಗೆ ಊಟ ಕಟ್ಟಿಕೊಡಲಾಗುವುದಿಲ್ಲ. ಎರಡನೇ ಬಾರಿ ಊಟಕ್ಕೆ ಕೂಡಬಾರದು, ಊಟವಾದ ನಂತರ ತಟ್ಟೆ-ಲೋಟವನ್ನು ಮನೆಗೆ ಕದ್ದೊಯ್ಯಬಾರದು(ಸಿಸಿಟಿವಿ ಇರುತ್ತದೆ)...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.