ಹಣದ ಶ್ರೀಮಂತಿಕೆಗೂ ಹೃದಯ ಶ್ರೀಮಂತಿಕೆಗೂ ವ್ಯತ್ಯಾಸವೇನು?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹಣದ ಶ್ರೀಮಂತಿಕೆಗೂ ಹೃದಯ ಶ್ರೀಮಂತಿಕೆಗೂ ವ್ಯತ್ಯಾಸವೇನು?
ಮೊದಲನೆಯದು ಎಲ್ಲರಿಗೂ ಕಾಣುತ್ತದೆ. ಇನ್ನೊಂದು ಯಾರಿಗೂ ಕಾಣುವುದಿಲ್ಲ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಬಸ್ಸಿನಲ್ಲಿ ಮಹಿಳೆಯರಿಗೆ, ಹಿರಿಯರಿಗೆ ಸೀಟು ಮೀಸಲಿದ್ದಂತೆ ಪ್ರೇಮಿಗಳಿಗೆ ಏಕಿಲ್ಲ?
ಪ್ರೇಮಿಗಳಿಗೆ ಸಿನಿಮಾ ಮಂದಿರದಲ್ಲಿ ಕಾರ್ನರ್ ಸೀಟು ಮೀಸಲು.
ವಿಷ್ಣುಶಂಕರ್, ಶಿವಮೊಗ್ಗ
ಯಡ್ಡಿ ಮತ್ತು ಈಶ್ವರಿಯನ್ನು 'ಮಲೆನಾಡ ಮದಗಜಗಳು' ಎಂದು ಸಂಭೋದಿಸಿದರೆ ಹೇಗೆ?
ಕಾಂಗ್ರೆಸ್ಸಿಗರು 'ಮುದಿಗಜಗಳು' ಎಂದು ಟೀಕೆ ಮಾಡಬಹುದು!
ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣಿನ ಜತೆ ಬೆಳಕಿನಲ್ಲಿ ವಾದ ಮಾಡುವುದಕ್ಕಿಂತ ಕತ್ತಲೆಯಲ್ಲಿ ರಾಜಿಯಾಗುವುದು ಲಾಭಕರ ಅಲ್ವಾ?
ಹುಡುಗರಿಗೆ ಸದಾ ರಾತ್ರಿ ರಾಜಿಯದ್ದೇ ಧ್ಯಾನ.
ರವಿಕುಮಾರ, ಜಿ.ಬಿ. 9449669897
ಪ್ರಧಾನಿ ಜತೆ ನಿಮ್ಮ ವಿದೇಶ ಪ್ರವಾಸದಲ್ಲಿ ಮರೆಯಲಾಗದ ಘಟನೆ ಯಾವುದು ಭಟ್ರೇ?
ಅವರು ಮಾತನಾಡಿದ್ದು!
-ಬಾಣಭಟ್ಟ