ಹುಡುಗಿಯರಿಗೆ ಚಿನ್ನ ಅಂದ್ರೆ ಇಷ್ಟ. ಅದೇ ಹುಡುಗರಿಗೆ?
ವಿ. ಹೇಮಂತಕುಮಾರ, 9916707979
ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳಂತೆ. ಮೋದಿಯವರ ಹಿಂದೆ ಇರುವ ಮಹಿಳೆ ಯಾರು?
ಆರ್ಎಸ್ಸೆಸ್ನವರನ್ನು ಕೇಳಿದರೆ ಖಂಡಿತವಾಗಿ 'ಭಾರತಾಂಬೆ' ಎಂದು ಹೇಳುತ್ತಾರೆ.
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಹುಡುಗಿಯರಿಗೆ ಚಿನ್ನ ಅಂದ್ರೆ ಇಷ್ಟ. ಅದೇ ಹುಡುಗರಿಗೆ?
ಚಿನ್ನ ಇಷ್ಟಪಡೋರು ಇಷ್ಟ!
ಫ್ಯಾಷನ್ ಡಿಸೈನರ್ ಮಧು, 9945737427
ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ. ಪ್ರೀತಿಯಿಲ್ಲದೇ ಪದೇ ಪದೇ ಮೊಬೈಲ್ ರಿಂಗ್ ಆಗುವುದಿಲ್ಲ ಅಲ್ವಾ?
ಪ್ರೀತಿಯಿದ್ದವರು ಮಾತ್ರವಲ್ಲ ಸಾಲ ಕೊಟ್ಟವರೂ ಕಾಲ್ ಮಾಡುತ್ತಾರೆ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಓದಿನಲ್ಲಿ ಮೆರಿಟ್ ಪಡೆದವನು ಜೀವನದಲ್ಲಿ ಸ್ಪಿರಿಟ್ ಕಳೆದುಕೊಂಡಿದ್ದಾನಲ್ಲಾ?
ನೈಂಟಿ ಹಾಕಿಸಿ ನೋಡು. ಸ್ಪಿರಿಟ್ ಕೊರತೆ ನೀಗಬಹುದು!
ವಿದ್ಯಾನಾಗ್, ಬೆಂಗಳೂರು
ದೇವರಿದ್ದಾನೆ ಎಂಬುದು ನಂಬಿಕೆಯೋ, ಮೂಢನಂಬಿಕೆಯೋ?
ಬಿಡದಿಯಲ್ಲೇ ಇದ್ದಾನೆ ಎಂದು ನಂಬುವುದು ಮೂಢನಂಬಿಕೆ!
-ಬಾಣಭಟ್ಟ