ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗುಂಡು

Srinivasa Murthy VN
Updated On : 24 Oct 2013, 11:00 am

ಗುಂಡು
    ಗುಂಡಿಗೆ ಬೀಳಿಸುವುದರಿಂದ ಇದಕ್ಕೆ ಈ ಹೆಸರು
    ಹೆಂಡತಿಯ ಎದುರೂ ಗುಂಡು ಹಾಕುವ ಗಂಡಸನ್ನು "ಗುಂಡುಗಲಿ" ಎನ್ನಬಹುದು
    ಅದೆಷ್ಟೋ ಜನ ತಮ್ಮ ವೀರತನವನ್ನೆಲ್ಲ ಬಾಟಲಿಯೊಳಗಿನ ಗುಂಡಿಗೆ ಎದೆಯೊಡ್ಡುವುದಕ್ಕೇ ಖರ್ಚು ಮಾಡಿಕೊಳ್ಳುತ್ತಾರೆ
    ನಿಮ್ಮ ಕಾಲನ್ನು ಜಾರಿಸುವ ಎಣ್ಣೆ
    ಮನಸ್ಸು ಮತ್ತು ಬುದ್ಧಿಯ ಮಧ್ಯೆ ಸಂಪರ್ಕ ತಪ್ಪಿಸುವ ಮದ್ಯ
    ಗುಂಡಿಗೆ ಇರುವವರು ಅದನ್ನು ಪ್ರದರ್ಶಿಸಲು ಹೋಗಿ ಗುಂಡಿಗೆ ಬೀಳುವಂತಾಗುವುದು ಇದರಿಂದಲೇ
    ಭಂಡ ಗಂಡಸರ ಕಾರುಬಾರು ನಡೆಯುವ ಸಾಧನ
    ಬಾರ್ ಮಾಲೀಕರ ಹೊಟ್ಟೆಗೆ ಅನ್ನ, ಬಡವನ ಕಿಸೆಗೆ ಕನ್ನ
    ಕೆಲವು ಮೀಟಿಂಗ್‌ಗಳೆಲ್ಲ "ಗುಂಡು ಮೋಜಿನ ಸಭೆ"ಯಾಗಿ ಪರಿವರ್ತಿತವಾಗುವುದರ ಹಿಂದಿನ ಗುಟ್ಟು
    ಕೋವಿಯೊಳಗಿನ ಗುಂಡು ತಕ್ಷಣ ಬದುಕನ್ನು ತೆಗೆದರೆ ಬಾಟಲಿಯೊಳಗಿನ ಗುಂಡು ನಿತ್ಯವೂ ಕೊಲ್ಲುತ್ತದೆ
    ತಾತ್ಕಾಲಿಕವಾಗಿ ನಿಮ್ಮ ಉತ್ಸಾಹವನ್ನು ಹಿಗ್ಗಾಮುಗ್ಗಾ ಹಿಗ್ಗಿಸುವ ಸ್ಪಿರಿಟ್
    ಇದರಿಂದಾಗುವ ಅಪಾಯಗಳಿಗೆ ಗುಂಡಾಂತರ ಎನ್ನಬಹುದು
    ಪೆಗ್ಗು ಹಾಕಿ ಪಿಗ್ಗಿ ಬೀಳುವುದು ಇದರಿಂದಲೇ
    ಗುಂಡು ಹಾಕಿದವ ಗುಂಡಿಗೇ ಬೀಳುವ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement