ರಮ್ಯಾ ಮಂಡ್ಯದಾಗೆ ತೊಟ್ಟಿಮನೆ ಮಾಡ್ಕೊಂಡ್ ಇರ್ತಾರಂತೆ?
ಎಸ್. ರಾಘಣ್ಣ, ಕೃಷ್ಣಮೂರ್ತಿಪುರಂ, ಮೈಸೂರು
'ದೂರದ ಬೆಟ್ಟ' ನೋಡೋಣು ಅಂತ ಕರೆದ್ರೆ, ಅವಳು ಮೊದ್ಲು 'ಎಡಕಲ್ಲು ಗುಡ್ಡದ ಮೇಲೆ' ಹೋಗೋಮು ಅಂತಿದಾಳಲ್ಲ?
ಅಲ್ಲಿ ಹೋದಮೇಲೆ 'ಬೇಡ ಕೃಷ್ಣ ರಂಗಿನಾಟ' ಎನ್ನಬಾರದು ಅಂತ ಶರತ್ತು ವಿಧಿಸು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಒಂದುವೇಳೆ ದ್ರೌಪದಿ ಸೀರೆಯ ಬದಲು ಚೂಡಿದಾರ ಧರಿಸಿದ್ದರೆ ದುಶ್ಶಾಸನ ಏನು ಮಾಡುತ್ತಿದ್ದ?
ದುಶ್ಶಾಸನನಿಗಿಂತ ಹೆಚ್ಚಿನ ಸಮಸ್ಯೆ ಕೃಷ್ಣನಿಗಾಗುತ್ತಿತ್ತು!
ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ, 9972448183
ಸಂಸದೆ ರಮ್ಯಾ ಮಂಡ್ಯದಾಗೆ ತೊಟ್ಟಿಮನೆ ಮಾಡ್ಕೊಂಡ್ ಇರ್ತಾರಂತೆ?
ಅವರು ಬೇಗ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ.
ಫ್ಯಾಷನ್ ಡಿಸೈನರ್ ಮಧು, 9945737427
ಸಿಪ್ಪೆ ತೆಗೆದ ಹಣ್ಣನ್ನು ಬೇಗ ತಿನ್ನಬೇಕು. ಮೆಚ್ಚಿ ಬಳಿಬಂದ ಹೆಣ್ಣನ್ನು ಬೇಗ ಒಪ್ಪಿಕೊಳ್ಳಬೇಕು ಅಂತಾರಲ್ಲ?
ಮೆಚ್ಚಿ ಬಂದ ಹೆಣ್ಣು, ನಾ ಮುಚ್ಚಿ ತಿನ್ನೊ ಹಣ್ಣು ಎಂಬ ಹಾಡು ಹಳತಾಯ್ತಲ್ಲ ಮಂಜು.
ಹರಳಹಳ್ಳಿಪುಟ್ಟರಾಜು, ಪಾಂಡವಪುರ, 9632839088
ನೋವಿಲ್ಲದ ಪ್ರೇಮವಿಲ್ಲ, ಸಾವಿಲ್ಲದ ಬದುಕಿಲ್ಲ, ತಾಯಿಯಿಲ್ಲದ ಮಗುವಿಲ್ಲ, ಕನಸಿಲ್ಲದ?
ಮನುಷ್ಯನಿಲ್ಲ!
-ಬಾಣಭಟ್ಟ