ಪ್ರಸಕ್ತ ರಾಜಕಾರಣಿಗಳಲ್ಲಿ ಎಷ್ಟು ಬಗೆ?
ಗುರು ಬನವಾಸಿ, 9480931442
ಅಆಇಈ ಕನ್ನಡ ವರ್ಣಮಾಲೆ. ಎಬಿಸಿಡಿ ಇಂಗ್ಲೀಷ್ ವರ್ಣಮಾಲೆ. ಆದರೆ ಪ್ರೇಮದ ವರ್ಣಮಾಲೆ ಯಾವುದು?
ಪ್ರೇಮ ವರ್ಣಮಾಲೆ, ಗ್ರಾಮರ್ ಕಲಿಯುವುದಕ್ಕೆ ಕಾಯುತ್ತ ಕೂರುವುದಿಲ್ಲ
ಕಂಚಗನಹಳ್ಳಿ ಧನಂಜಯ, 9141308498
ಪ್ರಸಕ್ತ ರಾಜಕಾರಣಿಗಳಲ್ಲಿ ಎಷ್ಟು ಬಗೆ?
ಬಗೆಗಳೇನಿಲ್ಲ. ಹೆಚ್ಚಿನವರೆಲ್ಲ ಪ್ರಜೆಗಳನ್ನು 'ಬಗೆ'ಯುವವರೇ!
ರವಿಕುಮಾರ್ ಜಿ. ಬಿ. 9449669897
ವಿದೇಶ ಪ್ರವಾಸಕ್ಕೆ ಹೋದ ಶಾಸಕರು ವಾಪಸು ಬಂದು ಏನನ್ನು 'ಕಡಿದು ಗುಡ್ಡೆ' ಹಾಕುತ್ತಾರೆ?
ವಿದೇಶದಲ್ಲಿ ಬಾಯಲ್ಲಿಟ್ಟು ಕಡಿದಿದ್ದಕ್ಕೆ- ಕುಡಿದಿದ್ದಕ್ಕೆ ಆದ ಬಿಲ್ಲನ್ನೆಲ್ಲ ಗುಡ್ಡೆ ಹಾಕಿ ತಂದಿರುತ್ತಾರೆ.
ಬಿ. ಎಮ್. ಪರಶಿವಮೂರ್ತಿ, ಬೆಂಗಳೂರು
ಕುಡುಕರ ಸಹಕಾರಿ ಬ್ಯಾಂಕ್ ಮಾಡೋಣ ಅಂದುಕೊಂಡಿದ್ದೇನೆ. ಮೆಂಬರ್ ಆಗ್ತೀರಾ?
ಯಾವುದಕ್ಕೂ ಸಂಜೆ ಸಿಗೋಣ!
ವಿಕ್ರಂ ಕುಮಾರ್, 8123318034
ದುಡ್ಡಿದ್ರೆ ಎಲೆಕ್ಷನ್ಗೆ ನಿಂತ್ಕೊತಿದ್ದೆ ಅಂತ ಮಾತನಾಡುವ ಮಂದಿ ಗೆದ್ದು ಅಧಿಕಾರಕ್ಕೆ ಬಂದರೆ ಸಾಧನೆ ಮಾಡ್ತಾರಾ?
ನಂತರದ ಎಲೆಕ್ಷನ್ಗೆ 'ದುಡ್ಡಿದ್ರೆ ನಿಂತ್ಕೋತಿದ್ದೆ' ಅನ್ನೋ ಮಾತೇ ಇರದಂತೆ ಸಾಧನೆ ಮಾಡ್ತಾರೆ!
-ಬಾಣಭಟ್ಟ