ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರಥಮ ಚುಂಬನ ದಂತ ಭಗ್ನವಾಗಬಹುದು ತಪ್ಪಿಸಿಕೊಳ್ಳುವ ಬಗೆ ಹೇಗೆ?

Srinivasa Murthy VN
Updated On : 17 Sept 2013, 11:04 am

ಚಿರಪ್ರಭ ನಂಜನಗೂಡು, 8553793017
ದೇಗುಲಗಳನ್ನು ವಶಪಡಿಸಿಕೊಂಡ ಘಜ್ನಿ ಮಹಮ್ಮದ್ ಲೂಟಿ ಮಾಡಿದ. ಈಗಿನ ಕೇಂದ್ರ ಸರ್ಕಾರ?
ಅವನು ಮಾಡಿದರೆ ಲೂಟಿ. ಇವರು ಮಾಡಿದರೆ ಡ್ಯೂಟಿ!

ದೇವೇಗೌಡ, ಬೆಮೆಲ್, ಪಾಂಡವಪುರ
ಅಧಿಕಾರಿಗಳು ಪ್ರಾಮಾಣಿಕರಾಗಿರಬೇಕು ಎಂದು ರಾಜಕಾರಣಿಗಳುಹೇಳುವುದು ಯಾಕೆ?
ಅಂದರೆ ಅವರು ಪಾಲು ಕೇಳಬಾರದು ಅಂತ!

ಫ್ಯಾಷನ್ ಡಿಸೈನರ್ ಮಧು, 9945737427
ನೆಟ್ಟಗೆ ಕುಳಿತು ಓದಬೇಕಾದ ವಯಸ್ಸಿನಲ್ಲಿ 'ನೆಟ್‌' ಮುಂದೆ ಕುಳಿತು ಭವಿಷ್ಯ ಹಾಳುಮಾಡಿಕೊಳ್ತಾರಲ್ಲ?
ನೆಟ್ಟಗೆ ಕುಳಿತು ಓದುವುದು ಬಿಟ್ಟು 'ನೆಟ್‌' ಮುಂದೆ ಕುಳಿತರೆ ಭವಿಷ್ಯ ನೆಟ್‌ಗಿರೋದಿಲ್ಲ ಅಂತ ಅವರಿಗೆ ಗೊತ್ತಿಲ್ಲ.

ಕೆ.ಜೆ. ರಾಮಪ್ರಸಾದ್, ಕಡೂರು
ಕೌಟುಂಬಿಕ ಸುಖ ಶಾಂತಿಗಾಗಿ ಎಲ್ಲರೂ ಮಾಡಬಹುದಾದ ಪರಿಹಾರಗಳೇನು?
ಕುಟುಂಬ ಮಾಡಿಕೊಳ್ಳದೇ ಇರುವುದು!

ಸಿ. ನಾಗರಾಜ ಅರದೋಟ್ಲು ಭದ್ರಾವತಿ
ಪ್ರಥಮ ಚುಂಬನ ದಂತ ಭಗ್ನವಾಗಬಹುದು ತಪ್ಪಿಸಿಕೊಳ್ಳುವ ಬಗೆ ಹೇಗೆ?
ಮೊದಲೇ ಹಲ್‌ಸೆಟ್ ಹಾಕಿಸಿಕೊಂಡುಬಿಡು!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement