ತೊಗೋ, ಈ ಹಾಜ್ಮೋಲಾ ತಿನ್ನು..
ಭಿಕ್ಷುಕ: ಅಯ್ಯಾ...ನಿಮ್ಮ ಪಕ್ಕದ ಮನೆಯವರು ಹೊಟ್ಟೆ ತುಂಬಾ ಊಟ ಕೊಟ್ಟಿದಾರೆ, ನೀವೂ ಏನಾದ್ರೂ ಕೊಡ್ರಯ್ಯಾ...
ಕಂಜೂಸ್: ತೊಗೋ, ಈ ಹಾಜ್ಮೋಲಾ ತಿನ್ನು, ತಿಂದಿದ್ದೆಲ್ಲ ಚೆನ್ನಾಗಿ ಜೀರ್ಣ ಆಗುತ್ತೆ!
---
ಒಂದು ಬಾರಿ ನೂತನ ದಂಪತಿ ಕೋಲ್ಯನ ಮನೆಗೆ ಬಂದರು. ಕೋಲ್ಯ ಮತ್ತವನ ಹೆಂಡತಿ ಹುಚ್ಚೆದ್ದು ಅವರ ಸೇವೆಗೆ ನಿಂತರು. 4-5 ದಿನ ಕೋಲ್ಯನ ಮನೆಯಲ್ಲಿ ಆದರಾತಿಥ್ಯ ಸ್ವೀಕರಿಸಿದ ಆ ಜೋಡಿ ಸಂತೃಪ್ತಿಯಿಂದ ಟಾಟಾ ಹೇಳಿ ಹೊರಟುಹೋಯಿತು.
ಹೆಂಡತಿ: 'ಅಯ್ಯೋ ಕೇಳೋದೇ ಮರೆತುಬಿಟ್ಟೆ. ಇವರು ನಿಮಗೆ ಹೇಗೆ ಸಂಬಂಧಿಕರಾಗಬೇಕು?'
ಇದನ್ನು ಕೇಳುತ್ತಿದ್ದಂತೆಯೇ ಕೋಲ್ಯ ಮೂರ್ಛೆ ಹೋದ. ಎಚ್ಚರವಾದ ನಂತರ ಅಂದ- 'ಮಾರಾಯ್ತಿ ಅವರಿಬ್ರೂ ನಿನ್ನ ಸಂಬಂಧಿಕರು ಅನ್ಕೊಂಡಿದ್ನಲ್ಲೇ!'
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.