ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೆಂಗಸರಿಗೆ ಒಡವೆ ಅಂದ್ರೆ ಪಂಚಪ್ರಾಣ, ಗಂಡಸರಿಗೆ?

Srinivasa Murthy VN
Updated On : 20 Sept 2013, 10:40 am

ಎಂ. ಬಿ. ಕೃಷ್ಣಮೂರ್ತಿ, 9449130531
ನಾವು ಸವಿಯುವ ಹಾಲು, ಮೊಸರು, ಬೆಣ್ಣೆ ಎಲ್ಲವೂ ಮೂಕಪ್ರಾಣಿಯ ಕೊಡುಗೆ. ಮಾತಾಡುವ ನಮ್ಮದೇನು ಕೊಡುಗೆ?
ಇವಕ್ಕೆಲ್ಲ ಕಲಬೆರಕೆಯ ಕೊಡುಗೆ ನಮ್ಮದೇ!

ಬಿ. ಎಮ್. ಪರಶಿವಮೂರ್ತಿ, ಬೆಂಗಳೂರು
ಹೆಂಗಸರಿಗೆ ಒಡವೆ ಅಂದ್ರೆ ಪಂಚಪ್ರಾಣ, ಗಂಡಸರಿಗೆ?
ಹೆಂಗಸರು ಅದರ ಹೆಸರೆತ್ತಿದೊಡನೆ ಹೋದಂತಾಗುವುದು ಗಂಡಸರ ಪ್ರಾಣ!

ಆರೀಫ್, ದಾವಣಗೆರೆ 9964280609
ತ್ರಿಕೋನ ಸರಣಿಯ ಪ್ರೀತಿಗಳೇ ಹೆಚ್ಚೇಕೆ?
ಶಾಲೆಯಲ್ಲಿ ಅರ್ಥವಾಗಿರದ ರೇಖಾಗಣಿತವನ್ನು ಜೀವನದಲ್ಲಿ ಬಗೆಹರಿಸಿಕೊಳ್ಳುವ ಉಮೇದು!

ಕಂಚಗನಹಳ್ಳಿ ಧನಂಜಯ, 9141308498
ಪ್ರೇಮಕೈದಿ ಅಂದರೆ ಯಾರು?
ಗೋಡೆ ಜಿಗಿದು ಒಳಹೋಗಿ ನಂತರ ತಪ್ಪಿಸಿಕೊಳ್ಳುವುದಕ್ಕೆ ಗೋಡೆ ಜಿಗಿಯುವ ಬಗ್ಗೆ ಯೋಚಿಸದೇ ಇರುವವರು!

ಮಗ್ಗಳ್ಳಿ ಗುರು, ಬನವಾಸಿ, 9480931442
ಸೊಸೆಗೆ ಕಿರುಕುಳ ಕೊಡುವ ಅತ್ತೆ ಹಿಂದೊಮ್ಮೆ ತಾನೂ ಸೊಸೆಯಾಗಿದ್ದನ್ನು ಮರೆಯುತ್ತಾಳೇಕೆ?
ಕೆಟ್ಟ ನೆನಪುಗಳನ್ನು ಮರೆತುಬಿಡಬೇಕು ಎಂಬ ಪಾಲಿಸಿ!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement