ಪಾಸುದಾರರನ್ನು ಕಂಡರೆ ಬಸ್ ಕಂಡಕ್ಟರ್ಗೆ ಏಕೆ ಮುನಿಸು?
ನೇರಲಗುಡ್ಡ ಶಿವಕುಮಾರ, ಸಿರಾ, 9480343742
ಪಾಸುದಾರರನ್ನು ಕಂಡರೆ ಬಸ್ ಕಂಡಕ್ಟರ್ಗೆ ಏಕೆ ಮುನಿಸು?
ಚಿಲ್ಲರೆ ಆಮೇಲೆ ಕೊಡುತ್ತೇನೆಂದು ಲಪಟಾಯಿಸಲು ಸಾಧ್ಯವಿಲ್ಲವಲ್ಲ ಅದಕ್ಕೆ!
ಪೇಂಟರ್ ಪಾಪು, ಚಾಮರಾಜನಗರ, 9008877712
ಮದುವೆಯ ಮುನ್ನ ಯುಗಳ ಗೀತೆಯಂತೆ, ನಂತರ ಯಾಕೆ ಜಗಳ ಗೀತೆ?
ಸಂಸಾರ ನಡೆಸೋದು ಪೇಂಟ್ ಮಾಡಿದಷ್ಟು ಸುಲಭ ಅಲ್ಲ ಮಚ್ಚಾ.
ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
'ಫಿಗರ್' ನೋಡಿದ್ರೆ ಶುಗರ್ ಕಡಿಮೆಯಾಗುತ್ತಂತೆ ಹೌದಾ?
ಇರಬಹುದು. ಆದ್ರೆ ಬಿಪಿ ಜಾಸ್ತಿಯಾಗುತ್ತೆ!
ಚಿರಪ್ರಭ ನಂಜನಗೂಡು, 8553793107
ಭಾರತ ರತ್ನ ಪ್ರಶಸ್ತಿಯಂತೆ ಹಗರಣರತ್ನ, ಅಪಹರಣ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದರೆ ಹೇಗೆ?
ಯಾರಿಗೆ ಕೊಡಬೇಕು ಎಂಬ ಬಗ್ಗೆ ಪ್ರತ್ಯೇಕ ಆಯೋಗವನ್ನೇ ನೇಮಿಸಬೇಕಾಗಬಹುದು!
ಮನು ವಿ. ದಾವಣಗೆರೆ, 9739259427
ವಿವಾಹವಾಗುವುದಕ್ಕೆ ಗಂಡು ಹೆಣ್ಣಿಗಿಂತ ದೊಡ್ಡವನಾಗಿರಬೇಕೆ?
ಇಬ್ಬರ ಹೃದಯ ದೊಡ್ಡದಿದ್ದರೆ ಸಾಕು. ಬೇರೇದೆಲ್ಲ ಗೌಣ.
-ಬಾಣಭಟ್ಟ