ಮುಜಫರ್ನಗರದ ನಿಜಚಿತ್ರ
ಪ್ರತಾಪಸಿಂಹರವರ ಅಂಕಣ ಬೆತ್ತಲೆ ಪ್ರಪಂಚ (ಕ.ಪ್ರ. ಸೆ. 21, 2013) ಮುಜಫರ್ನಗರದಲ್ಲಿ ನಡೆದ, ನಡೆಯುತ್ತಿರುವ ಅಮಾನವೀಯ ಘಟನೆಗಳ ನೈಜ ಚಿತ್ರಣ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರೇ, ಮುಸ್ಲಿಮರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿ ಕೋಮುಗಲಭೆಗೆ ಕುಮ್ಮಕ್ಕು ಕೊಡುವುದು ನಮ್ಮ ಪ್ರಜಾಪ್ರಭುತ್ವದ ಘೋರ ದುರಂತ. ಇಂತಹ ಸಮಾಜವಿರೋಧಿ ಮತಾಂಧ ಸಚಿವರ ಕೈವಾಡವಿರುವುದಕ್ಕೆ ಸಾಕಷ್ಟು ಪುರಾವೆ, ಸಾಕ್ಷ್ಯಗಳಿದ್ದರೂ ಸಚಿವರ ವಿರುದ್ಧ ಕ್ರಮಕೈಗೊಳ್ಳದಿರುವುದು, ಹೇಡಿತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡು. ಮತಾಂಧರಿಗೆ ಹೆದರಿ, ಶೋಷಿತರಿಗೆ ರಕ್ಷಣೆ ನೀಡದಿರುವುದು ಯಾವ ಸೀಮೆಯ ಸಮಾಜವಾದ? ದೆಹಲಿ ಗ್ಯಾಂಗ್ರೇಪ್ ವಿಶ್ವಾದ್ಯಂತ ಸುದ್ದಿ ಮಾಡಿತು. ಆದರೆ ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಮುಸ್ಲಿಂ ಪುಂಡರ ಕ್ರೌರ್ಯಕ್ಕೆ ಬಲಿಯಾಗಿರುವ, ಬಲಿಯಾಗುತ್ತಿರುವ ಜಾಟ್ ಹೆಣ್ಣು ಮಕ್ಕಳ ದಯನೀಯ ಸ್ಥಿತಿ ನಮ್ಮ ಮಾಧ್ಯಮದವರ, ರಾಜಕೀಯ ನಾಯಕರ, ಬುದ್ಧಿಜೀವಿಗಳ ಕಣ್ಣುಗಳಿಗೆ ಕಾಣುತ್ತಿಲ್ಲವೇಕೆ? ಅಪರಾಧಿಗಳು 'ಮುಸ್ಲಿಮರು' ಎನ್ನುವ ಏಕೈಕ ಕಾರಣಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿರುವುದು ಎಷ್ಟು ಸರಿ? ಇದು ಡಾ. ಬಿ.ಆರ್. ಅಂಬೇಡ್ಕರ್ರವರ ಆಶಯಗಳಿಗೆ ವಿರುದ್ಧವಲ್ಲವೇ? ಸಂವಿಧಾನದ ಉಲ್ಲಂಘನೆಯಲ್ಲವೇ? ಮುಜಫರ್ನಗರದಲ್ಲಿ ಹಿಂದೂ ಹೆಣ್ಣು ಮಕ್ಕಳ/ ಮಹಿಳೆಯರ ವಿಷಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲವೇ? ಕನಸಿನಲ್ಲೂ ಮೋದಿ ವಿರುದ್ಧ ಬೊಬ್ಬೆಯಿಡುವ ಬುದ್ಧಿಜೀವಿಗಳಿಗೆ ಇದು ಕಾಣುತ್ತಿಲ್ಲವೇ? ಮಹಿಳಾ ಆಯೋಗ, ಮಾನವ ಹಕ್ಕು ಆಯೋಗಗಳು ಕಣ್ಣು ಮುಚ್ಚಿ ಕುಳಿತಿವೆಯೇ?
- ಚಿರಪ್ರಭ, ನಂಜನಗೂಡು
ಜಾತ್ಯತೀತ ತೀವ್ರವಾದ
ಮೋದಿ ಪ್ರಧಾನಿಯಾದರೆ ನಾನು ಬದುಕಿರಲು ಇಷ್ಟಪಡುವುದಿಲ್ಲ ಎಂಬ ಸಮಾಜವಾದಿ, ಬುದ್ಧಿಜೀವಿ ಹಾಗೂ ಸಾಹಿತಿ ಯು.ಆರ್. ಅನಂತಮೂರ್ತಿಯವರ ಹೇಳಿಕೆಯ ಜಾತ್ಯತೀತತೆಯ ತೀವ್ರವಾದ ಎಂದೇ ಕರೆಯಬಹುದು. (ಒಂದು ರೀತಿ ಆತ್ಮಾಹುತಿದಾಳಿ). ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಅಥವಾ ಪಕ್ಷವನ್ನು ವಿರೋಧಿಸುವ ಹಕ್ಕು ಪ್ರತಿ ನಾಗರೀಕನಿಗೂ ಇದೆ. ಅದು ಸಂಘಟನೆ, ಚಳವಳಿ, ಹೋರಾಟ ಮತ್ತು ಇನ್ನಿತರ ನಾಗರೀಕ ಮಾರ್ಗಗಳಿಂದ ಮಾತ್ರ ಹೊರತು ಇಂತಹ ಹತಾಶೆಯ ಹೇಳಿಕೆಗಳಿಂದಲ್ಲ. ಯು.ಆರ್.ಅನಂತಮೂರ್ತಿಯವರು ಕನ್ನಡದ ಆಸ್ತಿ. ಅವರು ಇನ್ನೂ ಬಹುಕಾಲ ಬದುಕಿರಬೇಕೆಂದು ನಮ್ಮೆಲ್ಲರ ಆಶಯ.
- ಕೆ.ಎಸ್. ಜಗನ್ನಾಥ್, ಕಳಸ
ಸ್ವಾಗತಾರ್ಹ ಸುದ್ದಿ
ಕರ್ನಾಟಕಕ್ಕೆ ಕೇಂದ್ರ ನಗರಾಭಿವೃದ್ಧಿ ಇಲಾಖೆಯು 2104 ಬಸ್ಗಳನ್ನು ಮಂಜೂರು ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಜೆನರ್ಮ್ ಯೋಜನೆಯಡಿ 10,000 ಬಸ್ಗಳನ್ನು ಒದಗಿಸುವ ಗುರಿ ಕೇಂದ್ರದ್ದು. ಈ ಪೈಕಿ 2000 ಬಸ್ಗಳನ್ನು ಈಶಾನ್ಯ ರಾಜ್ಯಗಳಿಗೆ ಮೀಸಲಿರಿಸಿರುವುದು ಇದು ಕೇಂದ್ರ ಸರ್ಕಾರದ ಗಮನಾರ್ಹ ಬೆಳವಣಿಗೆಯಾಗಿದೆ. ಸಾರ್ವಜನಿಕರೆಲ್ಲ ಬಸ್ಗಳಲ್ಲಿ ಪ್ರಯಾಣ ಮಾಡಿದರೆ ಸ್ವಲ್ಪ ಮಟ್ಟಿಗಾದರೂ ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಬಹುದು. ಇದು ಕೇಂದ್ರ ಸರ್ಕಾರದ ಮೆಚ್ಚುವಂತಹ ಕಾರ್ಯ.
- ಶೋಭಾ ಎಂ. (ಹಿರೇಮಳಗಾವಿ), ಉಜಿರೆ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com