ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 10 Apr 2014, 10:03 am

ದಾವಣಗೆರೆ ಜಿಲ್ಲೆ ಹರಪನಹಳ್ಳಿಯಿಂದ ಕೆ. ಶ್ರೀನಿವಾಸರಾವ್ ಅವರು ಬರೆಯುತ್ತಾರೆ- "ದಾವಣಗೆರೆ ಬೆಣ್ಣೆ ದೋಸೆ ಯಾರಿಗೆ?' ಲೇಖನದಲ್ಲಿ ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲರು ಸಂದರ್ಶಕರಿಗೆ ನೀಡಿದ ಉತ್ತರಗಳಲ್ಲಿ ನಮ್ಮ ಎಂದು ಹೇಳಬೇಕಾದಡೆಯೆಲ್ಲ ತಮ್ಮ ಎಂದು ಹೇಳಿದ್ದಾರೆ. ಇದು ಸಂದರ್ಶಕರ ಬರವಣಿಗೆಯ ದೋಷವೋ, ಪಟೇಲರ ಉಚ್ಚಾರಣೆಯ ದೋಷವೋ ತಿಳಿಯಲಿಲ್ಲ. ಇದು ಹಲವೆಡೆ ಅರ್ಥ- ಅನರ್ಥವಾಗಿದೆ.'
'ಉದಾಹರಣೆಗೆ ಈ ಹೇಳಿಕೆ ಗಮನಿಸಿ. ಮಾಜಿ ಸಿ.ಎಂ. ಜೆ.ಎಚ್. ಪಟೇಲರು ತಮ್ಮ ತಂದೆ ಎಂಬುದೇ ದೊಡ್ಡ ಆಸ್ತಿ. ಇಲ್ಲಿ ಜೆ.ಎಚ್. ಪಟೇಲರು ಯಾರ ತಂದೆ ಎಂದು ನಾವು ಅರ್ಥೈಸಿಕೊಳ್ಳಬೇಕು. ನೀವೇ ಹೇಳಿ!'
"ನಾಲಿಗೆ ಬಿಗಿ ಹಿಡ್ದು ಮಾತಾಡಿ: ಈಶ್ವರಪ್ಪ' ತಲೆಬರಹದಲ್ಲಿ ಪ್ರಕಟವಾದ ವರದಿ (ಮಾ.26 ಶಿವಮೊಗ್ಗ ಆವೃತ್ತಿ)ಯಲ್ಲಿ ಈಶ್ವರಪ್ಪನವರು ಹೇಗೋ ನಾಲಿಗೆಯ ಪ್ರಸ್ತಾಪವೇ ಇಲ್ಲ. ಅಲ್ಲಿರುವುದು ಬೇಳೂರು ಗೋಪಾಲಕೃಷ್ಣರವರ ದೇಶಕ್ಕಾಗಿ ಬಿಜೆಪಿ ಸೇರಿದ ಸುದ್ದಿ!'
'ಅಂತೆಯೇ ಇದೇ ಸಂಚಿಕೆಯ 5ನೇ ಪುಟದ ವರದಿ 'ಮತದಾರರ ಮುಂದೆ ಅಳುವುದು ನೀತಿ ಸಂಹಿತೆ ಉಲ್ಲಂಘನೆ?'ಯಲ್ಲಿ ಎಚ್.ಡಿ. ಕುಮಾರಸ್ವಾಮಿ ಯವರ ಅಶ್ರುಧಾರೆಯ ಬಗ್ಗೆ ಬರೆದಿದ್ದೀರಿ. ಆದರೆ ಅಲ್ಲಿ ಪ್ರಕಟವಾಗಿರುವ ಛಾಯಾಚಿತ್ರ ಶ್ರೀರಾಮಸೇನೆಯ ಪ್ರಮೋದ ಮುತಾಲಿಕರದು!' ಎಂದಿದ್ದಾರೆ.
ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಮಾ.29ರ ಕೇಳ್ರಪ್ಪೋ ಕೇಳಿ 4ನೇ ನನ್ನ ಪ್ರಶ್ನೆಯಲ್ಲಿ ಪಕ್ಷಾಂತರಿ ಎನ್ನುವ ಬದಲು ಪಖಾಂತರಿ ಎಂದಾಗಿದೆ. ಮತದಾರರನ್ನು ಬೇಯಿಸುವ ರಾಜಕಾರಣಿಗಳಿಗೆ  ಫಖಾ...ಪಖಾನ ಪದದಿಂದ ಹುಟ್ಟಿರಬಹುದೇ? ಪಖಾಂತರಿ ಎಂದೂ ಹೊಸ ನಾಮಕರಣ ಮಾಡಬಹುದು ಎಂದು ನೀವು ಭಾವಿಸಿದ್ದೀರಾ?' ಎಂದಿದ್ದಾರೆ.
ಅಕ್ಷರ ತಪ್ಪಾಗಿದೆ ಹೊರತು, ಹೊಸ ಶಬ್ದ ಯಾವುದನ್ನೂ ಸೃಷ್ಟಿಸಿಲ್ಲ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಏ.2ರಂದು 'ಬೈಟುಕಾಫಿ'ಯ ಪುಟ 1ರಲ್ಲಿ 'ಸಿಂಗಲ್ ಈಸ್ ಕಿಂಗ್ ಪಾಲಿಟೆಕ್ಸೇ ಇವರಿಗೆ ಪತಿ, ಪತ್ನಿ' ಎಲ್ಲ ಶೀರ್ಷಿಕೆ ಲೇಖನದಲ್ಲಿ ಜಯಲಲಿತಾ ಅವರ ಬಗ್ಗೆ ಬರೆದಿರುವ ಲೇಖನ ಕಲಂ7ರಲ್ಲಿ ತಪ್ಪಾಗಿದೆ. 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜಯಾ ಇಂಡಿಗೂ ಹಾಲಿ ಪಟ್ಟ ಉಳಿಸಿಕೊಂಡಿದ್ದಾರೆ ಎಂದಿದೆ. ಅದು ಇಂದಿಗೂ ಹಾಲಿ ಪಟ್ಟ ಉಳಿಸಿಕೊಂಡಿದ್ದಾರೆ ಎಂದಿರಬೇಕಿತ್ತಲ್ಲವೇ?' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement