ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 16 Apr 2014, 12:55 pm

ಮೈಸೂರಿನ ಕೃಷ್ಣಮೂರ್ತಿ ಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಘನ ಘೋರ ಮಹಾಯುದ್ಧ ಹತ್ತಿರವಾಗುತ್ತಿದ್ದಂತೆ, ಪತ್ರಿಕೆಯ ಬಹುತೇಕ ಸ್ಥಳವನ್ನು ಚುನಾವಣಾ ಸುದ್ದಿಗಳು ಆಪೋಶನ ತೆಗೆದುಕೊಂಡಿದ್ದು, ಏಕದಿನ ಕ್ರಿಕೆಟ್ ಪಂದ್ಯದ ಕುತೂಹಲವನ್ನು ಓದುಗರಲ್ಲಿ ಸೃಷ್ಟಿಮಾಡುವುದರಲ್ಲಿ ಕ.ಪ್ರ. ಯಶಸ್ವಿಯಾಗಿದೆ. ಹಗಲಿರಳು ಎನ್ನದೆ ಪರ್ವ ಕಾಲದ ಈ ಸಂದರ್ಭದಲ್ಲಿ ಕಾರ್ಯಮಗ್ನರಾಗಿರುವ ಸುದ್ದಿಮನೆಯ ಕರ್ಮಚಾರಿಗಳಿಗೆ ಹುರುಪು, ಹುಮ್ಮಸ್ಸಿಗಾಗಿ ನಮ್ಮ ಆಶಯಗಳು.'
'ಕಾರ್ಯದ ಒತ್ತಡದಲ್ಲಿ ಪ್ರಮಾದಗಳು ಜರಗುವುದು ಸರ್ವೇ ಸಾಮಾನ್ಯ. ಅಂತಹ ಒಂದು ಪ್ರಮಾದ ಇಂದು ಅಂದರೆ ಏಪ್ರಿಲ್ 12ರಂದು ಜರುಗಿದೆ. ಬಿಜೆಪಿ ಪಾಲಿಗೆ ಆಡ್ವಾಣಿ ಮತ್ತು ನರೇಂದ್ರ ಮೋದಿ ಇಬ್ಬರೂ ಅನಿವಾರ್ಯ. ಒಂದು ರೀತಿ ಕ್ರಮವಾಗಿ ಹಳೇ ಬೇರು ಮತ್ತು ಹೊಸ ಚಿಗುರು ಇದ್ದಂತೆ. ಕೆಲ ದಿನಗಳ ಹಿಂದೆ ನಮ್ಮ ಭಟ್ಟರು ಇದೇ ಅಂಕಣದಲ್ಲಿ  ಕ.ಪ್ರ. ಆಡ್ವಾಣಿಯವರನ್ನು ಗೌರವದಿಂದಲೇ ಕಾಣುತ್ತಾ ಬಂದಿದೆ ಎಂಬ ಸ್ಪಷ್ಟನೆ ಕೊಟ್ಟಿದ್ದರು.'
'ಆದರೆ ಇಂದು 'ಪತ್ನಿ ಹೆಸರೇಳಲು ಇಷ್ಟು ವರ್ಷ ಬೇಕಾಯ್ತೆ: ರಾಹುಲ್ ಪ್ರಶ್ನೆ' ಎಂಬ ಚೌಕಟ್ಟಿನಲ್ಲಿ ಆಡ್ವಾಣಿಯವರನ್ನು ಬಿಜೆಪಿ ಯಿಂದ ಹೊರಹಾಕಲಾಗಿದೆ. ಜಸ್ವಂತ್ ಸಿಂಗ್‌ಗೆ ಆಡ್ವಾಣಿ ಸಾಥ್ ಕೊಟ್ಟಿದ್ದಾರೆ. ಈ ಸುದ್ದಿಯನ್ನು ಕನಸು ಮನಸಿನಲ್ಲೂ ಊಹಿಸಲು ಸಾಧ್ಯವೇ? ಕ.ಪ್ರ ಆಡ್ವಾಣಿಯವರನ್ನು ಬಿಜೆಪಿಗೆ ಮತ್ತೆ ಗೌರವಪೂರ್ವಕವಾಗಿ ಬರಮಾಡಿಕೊಳ್ಳುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಕುವೆಂಪು ನಗರದಿಂದ ನ್ಯಾಯವಾದಿ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಏ.4ರಂದು ಮೈಸೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಭಾರತ ವಿಜಯ ರ್ಯಾಲಿಯಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಆದರೆ ಏ.9ರಂದು 'ಕನ್ನಡಪ್ರಭ'ದ ಮೈಸೂರು ಆವೃತ್ತಿಯ ಮೂರನೇ ಪುಟದಲ್ಲಿ 'ಮೈಸೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಭಾರತ ವಿಜಯ ರ್ಯಾಲಿಯಲ್ಲಿ ಸಹಸ್ರ ಜನರು ಭಾಗಿ' ಎಂದು ವರದಿಯಾಗಿದೆ.
'ಮಾ.26ರಂದು ಪತ್ರಿಕೆಯಲ್ಲೊಂದು ಪುಟ್ಟ ತಪ್ಪಾಗಿದೆ. ಇದೇನೂ ಅಂತಹ ದೊಡ್ಡ ತಪ್ಪಲ್ಲದಿದ್ದರೂ ಮುಖಪುಟದಲ್ಲೇ ಹೀಗಾದುದರಿಂದ ಪತ್ರ ಬರೆಯಬೇಕಾಯ್ತು. ಕೇಜ್ರಿವಾಲ್ ಮತ್ತು ಉಳಿದ ನಾಯಕರ ಮೇಲೆ ಮೊಟ್ಟೆ ಹಾಗೂ ಶಾಯಿ ಎಸೆದ ಘಟನೆಯ ಸುದ್ದಿಯ ಶೀರ್ಷಿಕೆಯಲ್ಲಿ 'ಮೊಟ್ಟೆ, ಶಾಯಿ ಸೆಳೆತ..' ಎಂದಾಗಿದೆ. ಇದು 'ಮೊಟ್ಟೆ, ಶಾಯಿ ಎಸೆತ..' ಎಂದಾಗಬೇಕಿತ್ತು ಅಲ್ಲವೇ? ಎಂದಿದ್ದಾರೆ.
"ಪತ್ನಿ ಹೆಸರೇಳಲು ಇಷ್ಟು ವರ್ಷ ಬೇಕಾಯ್ತೆ: ರಾಹುಲ್ ಪ್ರಶ್ನೆ' ಸುದ್ದಿಯಲ್ಲಿ ಆಡ್ವಾಣಿಯನ್ನು ಕಡೆಗಣಿಸಿ, ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಆಗಬೇಕಿತ್ತು.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement