ದರೋಡೆ
= ರೋಡಿನಲ್ಲಿ ಮಾಡುವ ಕಳ್ಳತನ
= ಶ್ರೀಮಂತನಾಗಲು ಇರುವ ಶಾರ್ಟ್‌ಕಟ್ ರೋಡು
= ಲಾಠಿ ಹಿಡಿದು ಮಾಡಲಾಗುವ ಲೂಟಿ
= ಕೋಟಿ ವಿದ್ಯೆಗಿಂತ ಲೂಟಿ ವಿದ್ಯೆಯೇ ಮೇಲು ಎಂದು ಭಾವಿಸಿದ ರಾಜಕಾರಣಿಗಳ ಕಾಯಕ
= ದುರಾಡಳಿತದ ಫಲಿತ
= ಹಗಲು ದರೋಡೆ ಮಂತ್ರಿಗಳು ಮಾಡಿದರೆ ರಾತ್ರಿ ದರೋಡೆ ಅವರ ಭಂಟರು ಮಾಡುತ್ತಾರೆ
= ಧಾರವಾಡದಲ್ಲಿ ನಡೆದ ಧನಾಪಹಾರ
= ಬುರುಡೆ ಜ್ಯೋತಿಷಿಗಳ ನಿತ್ಯ ಕರ್ಮ
= ಮಾಲ್‌ಗಳಲ್ಲಿ ನಡೆಯುವ ಕಮಾಲ್‌ನ ಮೂಲ ಉದ್ದೇಶ
= ಕೆಲವು ಅಂಗಡಿಗಳಲಿ ಂ.ಖ.ಕಿಗಿಂತ ಹೆಚ್ಚು ರೇಟು ಕೇಳುವ ಮೂಲಕ ಇದನ್ನು ಮಾಡಲಾಗುತ್ತದೆ
= ಕೃತಕ ಅಭಾವ ಸೃಷ್ಟಿಯ ಹಿಂದಿರುವ ವ್ಯಾಪಾರೀ ಮನೋಭಾವ
= ಖಾಸಗೀ ಶಾಲೆಗಳು ಡೊನೇಷನ್ ಹೆಸರಲ್ಲಿ ನಡೆಸುವುದು ಇದನ್ನೇ
= ದರ ದರ ಎಳೆದು ತಂದು ಮಾಡಲಾಗುವ ಕಳ್ಳತನ
= ತಮ್ಮ ಜೀವದ ಬಗ್ಗೆ ದರಕಾರು ಇಲ್ಲದೇ ಮಾಡುವ ಬೇರೆಯವರ ದ್ರವ್ಯದ ಅಪಹರಣ
= ಪ್ರೇಯಸಿ ಪ್ರೀತಿಯ ಬಲೆಗೆ ಸಿಲುಕಿಸಿ ಮಾಡುವ ಕೆಲಸ
ವಿಶ್ವನಾಥ ಸುಂಕಸಾಳ
vishwasunkasal@yahoo.com