ಸಂಪಾದಕೀಯ

ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕಪ್ಪಗಿರುವುದೆಲ್ಲ?

Srinivasamurthy VN

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಫೋಟೊ ತೆಗೆಯುವುದನ್ನು ಯಾರಿಂದ ಕಲಿತರೆ ಚೆನ್ನ?
ರವೀಂದ್ರನಾಥ್ ಒಬ್ಬರನ್ನು ಬಿಟ್ಟು ಬೇರೆ ಯಾರಿಂದ ಬೇಕಾದರೂ ಕಲಿಯಿರಿ!

ಮಂಜುನಾಥ ಮದ್ದೂರು, 9686584959
ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕಪ್ಪಗಿರುವುದೆಲ್ಲ?
ದನವಲ್ಲ!

ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಕುಕ್ಕರ್ ಶೀಟಿ ಹೊಡೆಯೋದಕ್ಕೂ ಕಾಲೇಜ್ ಹುಡುಗರು ಶೀಟಿ ಹೊಡೆಯೋದಕ್ಕೂ ಏನು ವ್ಯತ್ಯಾಸ?
ಒಂದು ಅನ್ನ ಬೆಂದಿದ್ದಕ್ಕೆ, ಇನ್ನೊಂದು ಬೆದೆಗೆ ಬಂದಿದ್ದಕ್ಕೆ!

ಫ್ಯಾಷನ್ ಡಿಸೈನರ್ ಮಧು, 9945737427
ನಾ ನಿನ್ನ ಪ್ರೀತಿಸುವೆ ಎನ್ನುವುದಕ್ಕಿಂತ ನೀನೇ ನನ್ನ ಮನಸಲಿ ಎನ್ನುವುದು ಪರಿಣಾಮಕಾರಿ ಅಲ್ವಾ?
ಆದರೆ ಮನಸಲ್ಲಿರುವವರೆಲ್ಲ ಪ್ರೀತಿಪಾತ್ರರಲ್ಲ!

-ಬಾಣಭಟ್ಟ

SCROLL FOR NEXT