ತಂದೆ, ಗೋಡೆಗೆ ನೇತುಹಾಕಿದ್ದ ತನ್ನ ಮಗನ...
ತಂದೆ, ಗೋಡೆಗೆ ನೇತುಹಾಕಿದ್ದ ತನ್ನ ಮಗನ ಅಂಗಿಯನ್ನು ತಡಕಾಡಿದ. ಜೇಬಿನಲ್ಲಿ ಸಿಗರೇಟ್, ಗುಟ್ಖಾ, ಕತ್ರೀನಾ ಕೈಫ್ಳ ಚಿತ್ರ ಮತ್ತು ಕೆಲವು ಹುಡುಗಿಯರ ಫೋನ್ ನಂಬರ್ಗಳು ಸಿಕ್ಕವು. ತಂದೆಗೆ ಪಿತ್ತ ನೆತ್ತಿಗೇರಿತು. ಕೂಗುತ್ತಲೇ ಮಗನ ಕೋಣೆಗೋಡಿ, ಅವನನ್ನು ಹಿಡಿದು ಥಳಿಸತೊಡಗಿದ...
ತಂದೆ: ಹೇಳೋ 'ಕತ್ತೆ ಮಗನೆ', ಯಾವಾಗಿಂದ ಮಾಡ್ತಾ ಇದೀಯ ಇದನ್ನೆಲ್ಲ?
ಮಗ(ಅಳುತ್ತಾ): ಅಪ್ಪ, ಅದು ನಿನ್ನ ಅಂಗಿ!