ಹುಡುಗಿಯರದ್ದು ಓದಿನಲ್ಲಿ ಏಕಾಗ್ರತೆಯಾದರೆ, ಹುಡುಗರದ್ದು?
ತಲವಾಟ ಮಂಜುನಾಥ್, ಸಾಗರ, 9480931611
ಇಲ್ಲೊಬ್ಬ ಮದುವೆಯಾದ ನಂತರ ಹಗಲಲ್ಲಿ ನೋಡಿದ ಬಾವಿಯಲ್ಲಿ ರಾತ್ರಿಬಿದ್ದೆ ಅಂತಿದಾನಲ್ಲ?
ಎಲ್ಲರ ಸ್ಥಿತಿಯೂ ಅದೇ!
ಜಯಶ್ರೀ ಅಬ್ಬಿಗೇರಿ, ರಾಮದುರ್ಗ, ಬೆಳಗಾವಿ
ಶೀಲಾ ದಿಕ್ಷೀತ್‌ಗೆ ಕನಸಿನಲ್ಲಿ ಪೊರಕೆ ಬಂದು ಕಾಡುತ್ತಿದೆಯಂತಲ್ಲಾ ನಿಜವೇ?
ಪೊರಕೆ ಹಾಕಿ ಹೊರಕ್ಕೆ ಎಂದು ಆಂದೋಲನ ನಡೆಸುವ ಚಿಂತನೆಯಲ್ಲಿದ್ದಾರಂತೆ.
ಕಾಲ್‌ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಹುಡುಗಿಯರದ್ದು ಓದಿನಲ್ಲಿ ಏಕಾಗ್ರತೆಯಾದರೆ, ಹುಡುಗರದ್ದು?
ಹುಡುಗಿಯರ ಬಗ್ಗೆ ಸದಾ ಜಾಗೃತಿ!
ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಹೆಣ್ಣಿನ ಕಣ್ಣು ಮೀನು, ಗಂಡಿನ ಕಣ್ಣು ಗಾಳ ನಿಜವೇ ಭಟ್ರೇ?
ಗಾಳಕ್ಕೆ ಸಿಕ್ಕ ಮೀನಿನಂತೆ ವಿಲವಿಲ ಚಡಪಡಿಸುವವನು ಮಾತ್ರ ಗಂಡು!
ರವಿಕುಮಾರ ಜಿ.ಬಿ. 9449779897
ಫ್ಯಾಷನ್ ಡಿಸೈನರ್ ಮಧು ಹುಡುಗಿಯರ ಬಗ್ಗೆ, ಹೇಮಂತಕುಮಾರ ಆಂಟಿಯರ ಬಗೆಗಿನ ಪ್ರಶ್ನೆಗಳನ್ನೇ ಏಕೆ ಕೇಳುತ್ತಾರೆ?
ಅವರವರ ಭಾವಕ್ಕೆ ತಕ್ಕಂತೆ ಪ್ರಶ್ನೆಗಳಿರುತ್ತವೆ.
ಬಾಣಭಟ್ಟ