ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 9 Feb 2014, 10:13 am

ಮೈಸೂರಿನ ಜಿ.ಎಸ್.ಐ. ಕಾಲೇಜಿನ ವಿದ್ಯಾರ್ಥಿ ಆಗುಂಬೆಯ ಸ್ಕಂದ ಕೆ.ಎನ್. ಅವರು ಬರೆಯುತ್ತಾರೆ- 'ಫೆ.5ರಂದು 'ಬೈಟು ಕಾಫಿ'ಯ  ರಂಗೋಲಿ ಪುಟದಲ್ಲಿ (3ನೇ ಪುಟದಲ್ಲಿ) ಪ್ರಕಟವಾದ ನವೀನ್ ಸಾಗರ್ ಅವರ 'ದಾರಿ ತಪ್ಪಿದ ಮಗಳು' ಲೇಖನ ನಿಮ್ಮ ಪತ್ರಿಕೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ಎ.ಆರ್. ಮಣಿಕಾಂತ್ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ 'ಪ್ರೀತಿಯ ತಂದೆಗೆ ಮಗಳ ಪತ್ರ' ಕಥೆಯಂತೆಯೇ ಇಲ್ಲವೇ? ಇದು ಕಾಪಿಯೇ?'
'ನಿಮ್ಮ ಪತ್ರಿಕೆ ಉತ್ತಮವಾಗಿದ್ದರೂ ಬೇರೆ ಪತ್ರಿಕೆಗಳ ಹಾಗೆ ಜನರನ್ನು ತಲುಪುತ್ತಿಲ್ಲ. ನಮ್ಮೂರು ಆಗುಂಬೆ ಸಮೀಪದ ಒಂದು ಹಳ್ಳಿ. ಆಗುಂಬೆಯಿಂದ 15 ಕಿ.ಮೀ. ವ್ಯಾಪ್ತಿಯಲ್ಲೆಲ್ಲೂ ನಿಮ್ಮ ಪತ್ರಿಕೆ ಕಾಣಿಸುವುದೇ ಇಲ್ಲ. ಆದ್ದರಿಂದ ದಯಮಾಡಿ ಪತ್ರಿಕೆ ಸರಬರಾಜನ್ನು ವಿಸ್ತರಿಸಿ. ಪತ್ರಿಕೆಗೆ ಪ್ರತಿನಿತ್ಯ 4 ಆದರೂ ಬೇಸರವಿಲ್ಲ. ಪತ್ರಿಕೆಯ ಹಾಳೆ ಗುಣಮಟ್ಟ ಹೆಚ್ಚಿಸಿ' ಎಂದಿದ್ದಾರೆ.
ನಕಲು ಆಗಿರಲಿಕ್ಕಿಲ್ಲ. ಅಕಸ್ಮಾತ್ ಆಗಿದ್ದರೆ ಅದನ್ನು ನಮ್ಮ ಪತ್ರಿಕೆಯಲ್ಲೇ ಪ್ರಕಟಿಸುತ್ತಿರಲಿಲ್ಲ. ಒಬ್ಬ ಮನುಷ್ಯ ರಂತೆ 7 ಜನ ಇರುತ್ತಾರೆ ಎಂಬ ಮಾತಿದೆ. ಹಾಗಿರುವಾಗ ಒಬ್ಬರಂತೆ ಹಲವರು ವಿಚಾರ ಮಾಡಬಹುದಲ್ಲವೇ? ನವೀನ್ ಸಾಗರ್ ಅವರು ಮಣಿಕಾಂತ್ ಅವರ ಪುಸ್ತಕವನ್ನು ಓದದೆಯೂ ಇರಬಹುದು. ಓದದೇ ಇದ್ದಾಗ ಅದನ್ನು ಕಾಪಿ ಮಾಡಲು ಸಾಧ್ಯವಿಲ್ಲ. ಬರವಣಿಗೆಯಲ್ಲಿ ಹಲವು ಸಾಧ್ಯತೆಗಳಿವೆ. ಮಣಿಕಾಂತ್ ಅವರಿಗೆ ಹೊಳೆದ ರೂಪದ ಕಥೆಯ ಸೆಲೆಯೇ ಅವರಿಗೂ ಮೂಡಿರಲು ಸಾಕು.
ಇವೆಲ್ಲ ಕೇವಲ ಸಾಧ್ಯತೆಗಳು ಎಂದಷ್ಟೇ ಹೇಳುತ್ತಿದ್ದೇನೆ. ಕಾಪಿ ಸಾಧ್ಯತೆಯ ಹಾಗೆಯೇ ಈ ಸಾಧ್ಯತೆಗಳೂ ಇರುತ್ತವೆ.
ಇನ್ನು ಇತ್ತೀಚಿನ ದಿನಗಳಲ್ಲಿ ಪತ್ರಿಕೆಯ ಹಾಳೆಯ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಆದರೆ ಎಲ್ಲರೂ ಸ್ಕಂದ ಅವರಂತೆ ವಿಚಾರ ಮಾಡುವುದಿಲ್ಲ. ದರ ಹೆಚ್ಚಾದಾಗ ಓದುಗರ ಮೇಲೆ ಹೊರೆ ಬೀಳುತ್ತದೆ. ಆದ್ದರಿಂದ ನಮ್ಮ ಇತಿಮಿತಿಯೊಳಗೆ ಸಾಧ್ಯವಿರುವಷ್ಟು ಹೆಚ್ಚಿನ ಗುಣಮಟ್ಟ ನೀಡಲಾಗುತ್ತಿದೆ.
ಪತ್ರಿಕೆಯ ಪ್ರಸಾರದ ಬಗ್ಗೆ ಸ್ಕಂದ ಅವರಂತೆ ದೂರುವ ಸಾಕಷ್ಟು ಪ್ರೀತಿಯ ಓದುಗ ವರ್ಗವಿದೆ. ಅವರ ಕಷ್ಟ ನಮಗೂ ಅರ್ಥವಾಗುತ್ತದೆ. ಆದರೆ ವಿತರಣೆ ವ್ಯವಸ್ಥೆಯ ತೊಂದರೆ ಮತ್ತು ತಾಂತ್ರಿಕ ಕಾರಣಗಳಿಗಾಗಿ ಕೆಲವು ಕಡೆ ಪತ್ರಿಕೆಯನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ನಮಗೂ ಖೇದವಿದೆ. ವ್ಯವಸ್ಥೆ ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಆದಷ್ಟು ಬೇಗ ಈ ಸಮಸ್ಯೆ ನಿವಾರಿಸಲು ಪ್ರಯತ್ನಿಸೋಣ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement