ವಿವಾಹವಾಗಲೂ ಸರ್ಕಾರದಿಂದ ಅನುಮತಿ ಪಡೆಯುವ ನಿಯಮವಿದ್ದಿದ್ರೆ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಸೆಕ್ಸ್ ಬಗ್ಗೆ ಮಾತಾಡೋಕೆ ಅಂಜೋ ಇಂಡಿಯಾದ ಜನಸಂಖ್ಯೆ ವಿಶ್ವದ ಎರಡನೇ ಸ್ಥಾನ ಪಡೆದಿದೆಯಲ್ಲಾ?
ಮಾತಿಗಿಂತ ಕೃತಿಲೇಸು ಎಂಬ ಮಾತು ಸರಿಯಾಗಿ ಜಾರಿಯಾಗಿರುವುದು ಇಲ್ಲಿ ಮಾತ್ರ!
ಆರ್. ಮಧುಸೂದನ್, 9945737427
ತುಂಬಾ ಶ್ರೀಮಂತರ ಮಗಳನ್ನು ತುಂಬಾ ಸರಳವಾಗಿ ಮದುವೆ ಮಾಡಿಕೊಂಡು ಆದರ್ಶ ಅಳಿಯ ಆಗಬೇಕೆಂಬ ಆಸೆ?
ಮಾವನ ದುಡ್ಡು ಕರ್ಚು ಮಾಡುವಾಗಲೂ ಇದೇ ಸರಳತೆ ಉಳಿಸಿಕೊಂಡರೆ ಆಸೆ ಈಡೇರಬಹುದು.
ಆರ್.ಬಿ. ಚಂದ್ರಶೇಖರ, ಕೆ.ಆರ್. ನಗರ
ವೃದ್ಧರಿಗೆ ಹಲ್ಲುಸೆಟ್ ಉಚಿತವಾಗಿ ನೀಡಲು ಮುಂದಾಗಿರುವ ಸರ್ಕಾರ ಯುವಕರಿಗೆ ಏನು ನೀಡಬಹುದು?
ಕಡ್ಲೆಕಾಯಿ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ವಿವಾಹವಾಗಲೂ ಸರ್ಕಾರದಿಂದ ಅನುಮತಿ ಪಡೆಯುವ ನಿಯಮವಿದ್ದಿದ್ರೆ?
ಅನುಮತಿ ಬರುವುದರೊಳಗೆ ಮದುವೆ ವಯಸ್ಸು ಕಳೆಯುತ್ತಿತ್ತು!
ವಿ. ಹೇಮಂತ ಕುಮಾರ್, ಬೆಂಗಳೂರು, 9035992900
ಎಣ್ಣೆ ಇರುವವರೆಗೂ ದೀಪ, ಯೌವನ ಇರುವವರೆಗೂ ರೂಪ, ಪ್ರೀತಿ ಇರುವವರೆಗೂ?
ಜೀವನ!
ಬಾಣಭಟ್ಟ