ರಂಜಿತಾ ಈಗ ನಿತ್ಯಾ ಪಟ್ಟದರಸಿಯಂತೆ?
ಚಿರಪ್ರಭ ನಂಜನಗೂಡು
ಗಾಂಧಿ-ನೆಹರು ಹೆಸರಿನಲ್ಲಿರುವ ರಸ್ತೆಗಳು, ವೃತ್ತಗಳು ಹಾಗೂ ಉದ್ಯಾನವನಗಳ ಸಂಖ್ಯೆ ದೇಶದಲ್ಲಿ ಎಷ್ಟಿರಬಹುದು?
ಅದನ್ನು ಲೆಕ್ಕ ಮಾಡಲೇ ಇನ್ನೊಂದು ಆಯೋಗ ನೇಮಿಸಿಯಾರು ಹುಶಾರ್!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಚುನಾಯಿತರಾದ ನಂತರ ಜನಸೇವಕರು ನಾಯಕರಾಗಿ ಬದಲಾಗುವುದೇಕೆ?
ಮನದನ್ನೆ ಮದುವೆಯ ನಂತರ ಮನೆಯೊಡತಿಯಾಗುವುದಿಲ್ಲವೇ ಹಾಗೆ!
ಪುಟ್ಟಸೋಮನಹಳ್ಳಿ ಗಾನಾಸುಮಾ, ಪಾಂಡವಪುರ, ಮಂಡ್ಯ
ರಂಜಿತಾ ಈಗ ನಿತ್ಯಾ ಪಟ್ಟದರಸಿಯಂತೆ?
ಆನಂದಮಯಿ ಈ ಜಗಹೃದಯ ಅಂತ ಹಾಡ್ತಿದಾನಂತೆ ನಿತ್ಯ!
ರಂಜಿತ ಮೈಸೂರು
ದಿನಾರಾತ್ರಿ ಕನಸಲ್ಲಿ ಬರುವ ಫ್ಯಾಷನ್ ಡಿಸೈನರ್ ಮಧು ನನ್ನ ಮೈತುಂಬಾ ಕಚಗುಳಿ ಇಟ್ಟು ತೊಂದರೆ ಕೊಡ್ತಾನಲ್ಲ?
ಒಂದು ದಿನ ತಂಗಾಳಿಯಲ್ಲಿ ತೇಲಿ ಬಂದ ಸ್ಟೈಲಲ್ಲಿ ಹೆದರಿಸಿ ನೋಡು.
ಪಿ.ಜಿ. ರಾಜ್. ಶಿವಮೊಗ್ಗ, 9739363071
ಮಾತು ಬೆಳ್ಳಿ, ಮೌನ ಬಂಗಾರ. ಹಾಗಾದರೆ ಕಣ್ಣೀರು?
ಫ್ರೀ!
ಬಾಣಭಟ್ಟ