ಇನ್ನೊಬ್ಬರ ದುಡಿಮೆಯಲ್ಲಿ ಪುಕ್ಕಟೆಯಾಗಿ ಉಂಡು ಮಲಗುವವರು?
ಬಸವನ ಗೌಡ ಹೆಬ್ಬಳಗೆರೆ, ಚನ್ನಗಿರಿ
ಇದ್ದದ್ದನ್ನು ಇದ್ದಹಾಗೆಯೇ ಹೇಳುವವರಿಗೂ ಅದನ್ನು ತಿರುಚಿ ಹೇಳುವವರಿಗೂ ಇರೋ ವ್ಯತ್ಯಾಸ?
ಕ್ಯಾಮರಾಕ್ಕೂ ರಿಪೋರ್ಟರ್ಗೂ ಇರುವಷ್ಟೇ ವ್ಯತ್ಯಾಸ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಗುಜರಾತ್ ಎಂದಾಕ್ಷಣ ಚೇಳು ಕಡಿಸಿಕೊಂಡವರಂತೆ ಎಗರಿಬೀಳುತ್ತಾರಲ್ಲಾ ನಮ್ಮ ಬುದ್ದಿಜೀವಿಗಳು?
ಪಾಪ ಅವರಿಗೆ 2002 ಬಿಟ್ಟು ಬೇರೇನೂ ನೆನಪೇ ಇರುವುದಿಲ್ಲವಂತೆ!
ಜಗದೀಶ ಎಸ್. ಬೆಳಗಾವಿ, 8733444410
ಪ್ರೀತಿ ಫಜೀತಿ ಆಗುವುದು ಯಾವಾಗ?
ರಾಮದಾಸ್ ರೀತಿ ಆದಾಗ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ತಾಯಿ ಈರುಳ್ಳಿಯಾಗಿ ತಂದೆ ಬೆಳ್ಳುಳ್ಳಿಯಾದರೆ ಮಗಳು?
ಸಿಪ್ಪೆ ಸುಲಿಯುತ್ತ ಕೂರಬೇಕಾಗುತ್ತದೆ!
ಕಾಲ್ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಇನ್ನೊಬ್ಬರ ದುಡಿಮೆಯಲ್ಲಿ ಪುಕ್ಕಟೆಯಾಗಿ ಉಂಡು ಮಲಗುವವರು?
ಚುನಾವಣೆ ಸಂದರ್ಭದಲ್ಲಿ ಪಕ್ಷಸೇರಿ ಅಭ್ಯರ್ಥಿಯಾಗುವವರು!
ಬಾಣಭಟ್ಟ