ಮಜಾ
= ಮನುಜನಾಗಿ ಹುಟ್ಟಿರುವುದೇ ಮಜಾ ಮಾಡಲು ಎಂಬುದು ಕೆಲವರ ತತ್ತ್ವ
= ಒಂದು ದಿನ ಇಲ್ಲವಾಗುವ ಈ ದೇಹ ಇರುವವರೆಗೆ ಮಾಡಬೇಕಾದ ನಿತ್ಯ ಕರ್ಮ ಎಂಬುದು ಚಾರ್ವಾಕನ ಸುಚಾರು ವಾಕ್
= ಸಾಲ ಮಾಡಿಯಾದರೂ ಪಿಜ್ಜಾ ತಿನ್ನು ಎನ್ನುವವರ ಮನೋಧರ್ಮ
= ಭೋಗದ ಬೀಜ ಈ ಮಜ
= ಮಿತಿ ಮೀರಿದರೆ ಸಜಾಕ್ಕೆ ಕಾರಣವಾಗುವಂಥದ್ದು
ಬೇರೆಯವರ ದುಡ್ಡಿನಲ್ಲಿ ತಾವು ಮಜಾ ಮಾಡುವವರನ್ನು ಮಂತ್ರಿಗಳು ಎನ್ನಬಹುದು
= ಮನುಜನಾಗಿ ಹುಟ್ಟಿದವ ಪ್ರತಿಯೊಬ್ಬನ ಆಸೆ
= ಕದ್ದು ಬಿದ್ದು ಏನೇ ಮಾಡಿದರೂ ಇದು ಸಿಗುತ್ತದೆ.
= ಕಾನೂನು ಮುರಿದೂ ಸಿಕ್ಕುಬೀಳದಿರುವಿಕೆಯಲ್ಲಿ ತುಂಬಾನೇ ಮಜಾ ಇದೆ ಬಿಡಿ
= ಮಜಾ ಮಾಡಲೆಂದು ಕೆಲವರು ಪ್ರೀತಿಸುತ್ತಾರೆ. ಮದುವೆಯಾಗುವ ಮೂಲಕ ಸಜಾ ಅನುಭವಿಸುತ್ತಾರೆ
ವಿಶ್ವನಾಥ ಸುಂಕಸಾಳ
vishwasunkasal@yahoo.com