ಸಂಪಾದಕೀಯ

ಭರವಸೆಯೇ ಜೀವನದ ಮೆಟ್ಟಿಲಾದಾಗ

ಇದು ಡಬ್ಲು. ಮೈಖೇಲ್ ಎಂಬ ವ್ಯಕ್ತಿಯ ಕಥೆ. ಅವನ ಜೀವನದಲ್ಲಿ ನಡೆದಂತಹ ಘಟನೆಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು ಅವನೆಷ್ಟು ದುರಾದೃಷ್ಟವಂತ ಎಂಬ ಅರಿವಾಗುವುದು. ಅವನಿಗೆ 28 ವರ್ಷವಾಗಿದ್ದಾಗ 1971ರಲ್ಲಿ ತನ್ನ ಮೋಟರ್ ಬೈಕ್‌ನಲ್ಲಿ ಹೆದ್ದಾರಿಯಲ್ಲಿ ಹೋಗುವಾಗ ಒಂದು ಟ್ರಕ್‌ಗೆ ಢಿಕ್ಕಿ ಹೊಡೆದು ಅಪಘಾತವಾಯಿತು. ಆ ಸಂದರ್ಭದಲ್ಲಿ ಹೊತ್ತಿಕೊಂಡ ಬೆಂಕಿಗೆ ಸಿಲುಕಿ ಅವನ ಸ್ಫುರದ್ರೂಪಿ ಮುಖ ಸುಟ್ಟು ಗುರುತು ಸಿಗದಷ್ಟು ವಿಕಾರವಾಯಿತು. ಆಸ್ಪತ್ರೆಗೆ ಸೇರಿದಾಗ ಅವನ ಪರಿಸ್ಥಿತಿಯನ್ನು ನೋಡಿದ ವೈದ್ಯರು ಉಳಿಯಲಾರನೆಂದು ನಿರ್ಧರಿಸಿದರು. ಚರ್ಮ ಕಸಿಮಾಡಿ ಸಾಕಷ್ಟು ಅವನ ಕುರೂಪವನ್ನು ತಗ್ಗಿಸುವ ಪ್ರಯತ್ನ ಮಾಡಿದರು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಅವನ ಕೈಬೆರಳುಗಳೆಲ್ಲವೂ ಬೆಂದು ಹೋಗಿದ್ದುದರಿಂದ ಅವುಗಳನ್ನೂ ತೆಗೆಯಲಾಯಿತು. ಬೆರಳುಗಳಿಲ್ಲದ ಕೈ, ಚರ್ಮ ಕಸಿ ಮಾಡಿಸಿಕೊಂಡ ಮುಖ ಹೊತ್ತು ಹೇಗೋ ಅಪಾಯದಿಂದ ಪಾರಾದದ್ದು ವೈದ್ಯರಿಗೇ ಆಶ್ಚರ್ಯವಾಯಿತು. ನಂತರ ವರ್ಮಂಟ್ ಕ್ಯಾಸ್ಟಿಂಗ್ಸ್ ಎಂಬ ಕಂಪನಿಯೊಂದನ್ನು ಸ್ಥಾಪಿಸಿ ಕೋಟ್ಯಧೀಶನಾದ. ಅವನು ವಾಸವಾಗಿದ್ದ ನಗರ ಕೊಲರಾಡೋದ ಮೇಯರ್ ಆಗಿ ಚುನಾಯಿತನಾದ. ಆದರೂ ವಿಧಿ ಅವನನ್ನು ಬಿಡಲಿಲ್ಲ. ಕೈಬೆರಳುಗಳಿಲ್ಲದಿದ್ದರೂ ಸಹ ಪೈಲೆಟ್ ತರಬೇತಿ ಪಡೆದು ವಿಮಾನ ಚಲಾಯಿಸುವಾಗ ವಿಮಾನ 1975ರಲ್ಲಿ ದುರಂತಕ್ಕೀಡಾಗಿ ಅವನಿಗೆ ತುಂಬಾ ಪೆಟ್ಟು ಬಿತ್ತು. ಬೆನ್ನೆಲುಬು ವಾಸಿಯಾಗದಷ್ಟು ಘಾಸಿಯಾಗಿ ವ್ಹೀಲ್ ಚೇರ್‌ನಲ್ಲಿ ಓಡಾಡುವಂತಾಯಿತಾದರೂ ಅವನು ಜೀವನದ ಉತ್ಸಾಹವನ್ನು ಬಿಡಲಿಲ್ಲ. ನಂತರ ಅವನ ಉದ್ಯಮಕ್ಕೆ ಹೊಸ ರೂಪನೀಡಿ, ಅದರಲ್ಲಿ ಯಶಸ್ವಿಯಾದ. ತನಗೆಷ್ಟೇ ಅಡಚಣೆಯಾದರೂ ಭರವಸೆಗೆ ಮುಕ್ಕಾಗದಂತೆ ಅವನು ಇತರರಿಗೆ ಸ್ಫೂರ್ತಿದಾಯಕವಾಗಿರುವುದು ವಿಶೇಷ. ಕಷ್ಟಪಟ್ಟು ಕೆಲಸಮಾಡುವುದು, ಜೀವನದಲ್ಲಿ ಶಿಸ್ತು, ಸೋಲನ್ನು ಗೆಲುವಿನ ಮೆಟ್ಟಿಲಾಗಿ ರೂಪಿಸಿಕೊಳ್ಳುವುದು, ಸ್ಥಿರಬುದ್ಧಿ, ಛಲ, ಅನುರಾಗ ಇವೆಲ್ಲ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗುತ್ತವೆ ಎಂಬುದು ಅವನ ಅಭಿಪ್ರಾಯ. ಹೀಗಾಗಿ ಅವನು ತನ್ನ ಉದ್ಯಮದಲ್ಲಿ ಯಶಸ್ಸನ್ನು ಕಂಡು ಮಿಲಿಯನೇರ್ ಆಗಿ ವಿಜೃಂಭಿಸುತ್ತಿದ್ದಾನೆ. ಇದೀಗ ಮೈಖೇಲ್ ಅದ್ಭುತ ವಾಗ್ಮಿಯಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾನೆ. ವಿಶ್ವಾದ್ಯಂತ ತಿರುಗಿ ತನ್ನ ಪ್ರಖರ ಮಾತಿನಿಂದಾಗಿ ಎಲ್ಲರ ಗಮನ ಸೆಳೆದಿದ್ದಾನೆ. ವಿಶ್ವದ ಅನೇಕ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು ಮತ್ತು ಆಡಳಿತಗಾರರನ್ನು ಭೇಟಿಯಾಗಿ ಅವರಿಂದ ಪ್ರಶಂಸೆ ಪಡೆದಿದ್ದಾನೆ. ಅವನ ಹೇಳುವುದೇನೆಂದರೆ, ನೋವು ಅನಿವಾರ್ಯ, ದುಃಖ ಐಚ್ಛಿಕ. ನಾನು ದುಃಖಕ್ಕೆ ಹೆಚ್ಚು ಗಮನ ಕೊಡಲಿಲ್ಲ. ಹೀಗಾಗಿ ನೋವಿನಲ್ಲೂ ನಲಿವನ್ನು ಕಂಡು ಜೀವನವನ್ನು ಮುನ್ನಡೆಸಿ ಜೀವನವನ್ನೇ ನೋವು ನಿವಾರಕವನ್ನಾಗಿ ಮಾಡಿಕೊಂಡಿದ್ದೇನೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು