ವಿದ್ಯಾವಂತ
= ಹಣ ಗಳಿಕೆಯೇ ಜೀವನದ ಪರಮ ಲಕ್ಷ್ಯವೆಂದು ಬಗೆದು ಮೌಲ್ಯಗಳನ್ನು ಅಲಕ್ಷ್ಯ ಮಾಡುವವ
= ಹಲವಾರು ಉಪಾಯಗಳನ್ನು ಅಭ್ಯಸಿಸಿದವ, ಅವುಗಳ ಉಪಯೋಗಗಳನ್ನು ಅರಿಯದವ
= ಕಾಳಿಗಾಗಿ ಮೈ ಬಗ್ಗಿ ಕೂಲಿ ಮಾಡುವುದು ಕೀಳು ಎಂದುಕೊಳ್ಳುವ ಆಧುನಿಕ ಸಾಕ್ಷರ
= ಕೈ ಕೆಸರಾದರೆ ಅದನ್ನು ಗಲೀಜು ಎಂದು ಬಗೆವ ಕಾಲೇಜಿನ ಉತ್ಪನ್ನ
= ನೆಲ ಮೂಲ ಪರಿಚಯವಿಲ್ಲದ, ಅನುತ್ಪಾದಕ ಅನುಭೋಗಿ
= ಜ್ಞಾನಿಗೂ ಇವನಿಗೂ ಇರುವ ವ್ಯತ್ಯಾಸವೆಂದರೆ ಜ್ಞಾನಿಯ ಬಳಿ ಸರ್ಟಿಫಿಕೇಟ್ ಬದಲಿಗೆ ವಿವೇಕವಿರುತ್ತದೆ
= ಪುಸ್ತಕಸ್ಥ ವಿದ್ಯೆಯನ್ನು ಕಂಠಸ್ಥ ಮಾಡಿ ಬರೆದು ಪಾಸಾದ ಮೇಲೆ ಮರೆತವ
= ಟೇಬಲ್ ಮ್ಯಾನರ್ಸ್ ಕಲಿತು ಸೋಶಿಯಲ್ ಮ್ಯಾನರ್ಸ್ ಮರೆತವ ವಿದ್ಯಾಳ ಗಂಡ
= ಹಿತವೋ ಅಹಿತವೋ ಒಟ್ಟಾರೆ ಮಾಹಿತಿಗಳನ್ನೆಲ್ಲ ತಲೆಯಲ್ಲಿ ತುಂಬಿಕೊಂಡವ
ವಿಶ್ವನಾಥ ಸುಂಕಸಾಳ
vishwasunkasal@yahoo.com