ವಿದ್ಯಾವಂತ
ನಗರದಲ್ಲಿ ಬದುಕುವ ಅರ್ಹತೆಯನ್ನು ಗಳಿಸಿಕೊಂಡವ ಮತ್ತು ಹಳ್ಳಿಯನ್ನು ದೂರಲು ಬಲ್ಲವ
ಈತ ಸಮಸ್ಯೆಗೆ ಕಾರಣವನ್ನು ಹುಡುಕಬಲ್ಲ. ಪರಿಹಾರ ಗೊತ್ತಿಲ್ಲ
= ಆಧುನಿಕ ಶಿಕ್ಷಣ ವ್ಯವಸ್ಥೆಗಳೆಂಬ ಫ್ಯಾಕ್ಟರಿಯಿಂದ ಹೊರಬೀಳುವ ಯಂತ್ರ
ಭಿಕ್ಷುಕನಿಗೆ ಒಂದು ರೂಪಾಯಿ ಹಾಕದಿದ್ದರೂ ಹೋಟೆಲ್ ಮಾಣಿಗೆ ಐವತ್ತು ರೂಪಾಯಿ ಟಿಪ್ಸ್ ಹಾಕಿ ಮೆರೆವವ
= ಬಡತನ ನಿರ್ಮೂಲನೆಗೆ ಬಡವರ ನಿರ್ಮೂಲನೆಯೇ ಪರಿಹಾರ ಎಂಬ ಸಲಹೆ ಕೊಡುವವ
= ಗೊತ್ತಿದ್ದೂ ಮೌನವಾಗಿರುವವ ಜ್ಞಾನಿ. ಗೊತ್ತಿಲ್ಲದಿದ್ದರೂ ಬಡಬಡಾಯಿಸುವವನೇ 'ವಿದ್ಯಾವಂತ'
= ಬುದ್ಧಿವಂತ ಎಂಬ ಶಬ್ದದ ಪರಿಧಿಯ ಹೊರ ಅಂಚಿನಲ್ಲಿ ನಿಲ್ಲುವವ
= ಜ್ಞಾನಿಗೂ ವಿದ್ಯಾವಂತನಿಗೂ ವಿವೇಕ ಮಾತ್ರದಲ್ಲಿ ವ್ಯತ್ಯಾಸವಿದೆ
= ವಿದ್ಯೆ ಎನ್ನುವುದು ಒಂದು ಸಾಧನ ಅಥವಾ ಉಪಾಯ. ಅದನ್ನು ಯಾವಾಗ ಮತ್ತು ಹೇಗೆ ಬಳಸಬೇಕೆಂಬುದೇ ಜ್ಞಾನ
= ಎಲ್ಲ ವಿದ್ಯೆಗಳ ಬಗ್ಗೆಯೂ ಮಾಹಿತಿ ಇರುವ ಗೂಗಲ್ ವಿಶ್ವದ ಅತಿ ದೊಡ್ಡ ವಿದ್ಯಾವಂತ
-ವಿಶ್ವನಾಥ ಸುಂಕಸಾಳ
vishwasunkasal@yahoo.com