ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜೀವನದಲ್ಲಿ ಮಾಡಬೇಕಾದ ನಿತ್ಯ ಶೋಧನೆಯೇನು?

Srinivasa Murthy VN
Updated On : 3 Mar 2014, 10:17 am

ಆರೀಫ್ (ಅರಿ) ದಾವಣಗೆರೆ, 9964280609
ಯಾವಾಗಲೂ ಕಿಸಿ ಕಿಸಿ ಎಂದು ಹಲ್ಲು ಕಿರಿಯುವ ಹುಡುಗಿಯರನ್ನು ನಂಬಬಾರದಂತೆ?
ಹಾಗಂದುಕೊಂಡರೆ ಹಲ್ಲು ಉದುರಿದ ಅಜ್ಜಿಯರನ್ನು ಮಾತ್ರ ನಂಬಬೇಕಾಗುತ್ತದೆ!

ಪವನ್ ಕುಮಾರ್ ಎಂ. ಬಳ್ಳಾರಿ
ಪ್ರಾಣಿಗಳ ಹರಾಜಿಗೂ ಕ್ರಿಕೆಟ್ ಆಟಗಾರರ ಹರಾಜಿಗೂ ಏನು ವ್ಯತ್ಯಾಸ?
ಪ್ರಾಣಿಗಳ ಹರಾಜು ಕಡಿಯಲು, ಕ್ರಿಕೆಟಿಗರ ಹರಾಜು ದುಡಿಯಲು.

ಕಾಲ್ ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಪ್ರಕೃತಿ ನಮ್ಮ ತಾಯಿ. ವಿಕೃತಿ?
ಹೆಂಡತಿ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಜೀವನದಲ್ಲಿ ಮಾಡಬೇಕಾದ ನಿತ್ಯ ಶೋಧನೆಯೇನು?
ಸದಾ ಆನಂದಮಯಿಯಾಗಿರುವುದು ಹೇಗೆ ಎಂಬುದನ್ನು ಅರಿಯುವುದು.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಈಚಲು ಮರದ ಕೆಳಗೆ ಕೂತು ಮಜ್ಜಿಗೆ ಕುಡಿದ್ರೂ ಹೆಂಡ ಕುಡಿದ್ರು ಅಂತಾ ಬಾವಿಸ್ತಾರಲ್ಲ?
ಪಬ್‌ಗೆ ಹೋಗಿ ಜ್ಯೂಸ್ ಕುಡಿದು ಬಂದೆ ಅಂದ್ರೆ ಯಾರೂ ನಂಬಲ್ಲ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement