ಗಗನ ಸಖಿಯರಿರುವಂತೆ ಗಗನ ಸಖರೇಕಿಲ್ಲ?
ಚಿಕ್ಕಣ್ಣ ಕೊರಟಗೆರೆ, ತುಮಕೂರು, 9880692850
ಗಗನ ಸಖಿಯರಿರುವಂತೆ ಗಗನ ಸಖರೇಕಿಲ್ಲ?
ಅವರೂ ಇದ್ದಾರೆ. ಆದರೆ ಯಾರೂ ಗಮನಿಸುವುದಿಲ್ಲ.
ಫ್ಯಾಷನ್ ಡಿಸೈನರ್ ಮಧು, 9945737427
ಸುಳ್ಳು ಹೇಳಿ ಪ್ರೇಯಸಿಯನ್ನು ನಂಬಿಸಬಹುದು. ಹೆಂಡತಿಯನ್ನು ನಂಬಿಸುವುದು ಕಷ್ಟ ಅಂತಾರಲ್ಲ?
ಪ್ರೇಯಸಿ ಹೆಂಡತಿಯಾದರೆ ಇದೇ ಸಮಸ್ಯೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಜೀವನ ನಶ್ವರ, ನಾ ಸನ್ಯಾಸಿಯಾಗ್ತೇನೆ ಎಂದು ಹೇಳುತ್ತಿದ್ದವ ಈಗ ಎರಡು ಮಕ್ಕಳ ತಂದೆಯಾಗಿದ್ದಾನಲ್ಲಾ?
ಸನ್ಯಾಸಿಯಾಗುವ ಮೊದಲೇ ಜ್ಞಾನೋದಯವಾಗಿರಬೇಕು.
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಚುನಾವಣೆಯಲ್ಲಿ ಎಚ್ಚರಗೊಂಡ ಸರ್ಕಾರವನ್ನು ಆನಂತರ ಎಬ್ಬಿಸುವವರಾರು?
ಸರ್ಕಾರವನ್ನು ಸದಾ ಎಚ್ಚರದಲ್ಲಿ ಇಡಲೆಂದೇ ಬಿಜೆಪಿ ಸರ್ಕಾರ ಇದ್ದಾಗ ಅಷ್ಟೆಲ್ಲ ಚುನಾವಣೆಗಳು ನಡೆದವು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ನನ್ನೆದೆಯ ಹೂ ತೋಟದ ಮಾಲಿಕನೇ ಬೇಗ ಬಾ ಕಾಯ್ತಿದೀನಿ ಅಂತ ಸಂದೇಶ ಕಳ್ಸಿದಾಳಲ್ಲ?
ಅವಳ ಎದೆಗಾರಿಗೆ ಜೋರಾಗೇ ಇದೆ. ಹುಶಾರು.
ಬಾಣಭಟ್ಟ