ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 10 Mar 2014, 12:36 pm

ಬೆಂಗಳೂರಿನ ಶೇಷಾದ್ರಿಪುರದಿಂದ ರವಿಕುಮಾರ್ ಬರೆಯುತ್ತಾರೆ, 'ಫೆ.24ರಂದು ಪುಟ 12ರಲ್ಲಿ 'ಉ.ಕೊರಿಯಾದಲ್ಲಿ ಕೈದಿಗಳು ಇಲಿ, ಹುಳ, ಹಾವು ತಿನ್ನಬೇಕು....' ಎಂಬ ಸುದ್ದಿಯಲ್ಲಿ ಉತ್ತರ ಕೊರಿಯಾದಲ್ಲಿ ಕೈದಿಗಳು ಅನುಭವಿಸಿದ ಚಿತ್ರಹಿಂಸೆಯನ್ನು ಕೈದಿಗಳು ರಚಿಸಿದ ರೇಖಾಚಿತ್ರವನ್ನು ವರದಿಯ ಜತೆ ಪ್ರಕಟಿಸಿದ್ದೀರಿ. ಆದರೆ ಈ ರೇಖಾಚಿತ್ರವು ಕಣ್ಣಿಗೆ ಕಾಣಿಸುತ್ತಲೇ ಇಲ್ಲ. ಹಾಗೆಯೇ ಕ.ಪ್ರದಲ್ಲಿ ಅಕ್ಷರಗಳು ಸರಿಯಾಗಿ ಮುದ್ರಣ ಆಗದಿರುವುದು ಬೇಸರದ ಸಂಗತಿ. ಕರ್ನಾಟಕದಲ್ಲಿ ದಿನ ಪತ್ರಿಕೆಗಳಿಗೆ ಏನು ಕೊರತೆಯಿಲ್ಲ. ಪುಟ ಪುಟವು ರಂಗು ರಂಗಾಗಿ ಪ್ರಕಟಗೊಳ್ಳುತ್ತವೆ. ಇದು ನಮ್ಮ 'ಕನ್ನಡಪ್ರಭ'ಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ಹೆಸರಾಂತ ಸಂಪಾದಕರಾದ ವಿಶ್ವೇಶ್ವರ ಭಟ್‌ರ ಉತ್ತಮ ಲೇಖನಗಳು, ವರದಿಗಳು, ಜನಪ್ರಿಯ ಅಂಕಣಕಾರರನ್ನು ಒಳಗೊಂಡ ನನ್ನ ಮೆಚ್ಚಿನ ಪತ್ರಿಕೆ ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣವಾಗಿದೆ. ಆದರೆ ಮುದ್ರಣ ವಿಷಯದಲ್ಲಿ ತೀರಾ ಹಿಂದೆ ಇರುವುದು ಪತ್ರಿಕೆ ಅಭಿಮಾನಿಯಾದ ನನಗೆ ಬೇಸರ ತರಿಸಿದೆ. ನಾನು ಈ ರೀತಿಯ ಬೇಡಿಕೆ ಇಟ್ಟು ಪತ್ರ ಬರೆಯುತ್ತಿರುವುದು ತಪ್ಪಲ್ಲ ಎಂದು ತಿಳಿದುಕೊಂಡಿದ್ದೇನೆ' ಎಂದಿದ್ದಾರೆ.
ಎಚ್.ಕೆ. ಶಿವಶಂಕರ ಅವರು ಬರೆಯುತ್ತಾರೆ- 'ಫೆ.23ರ 'ಖುಷಿ'ಯ ಪಾಪು ಕಾರ್ನರ್‌ನಲ್ಲಿ 'ರುದ್ರ ರಮಣೀಯ' ಎಂಬ ಶೀರ್ಷಿಕೆ ಅಡಿಯಲ್ಲಿ  ಎಸ್.ಎಂ. ವರ್ಷಾ ಮಗುವಿನ ತಂದೆ ತಾಯಿಗಳ ಹೆಸರು ಅದಲು ಬದಲಾಗಿದೆ' ಎಂದಿದ್ದಾರೆ.
ಬೆಳಗಾವಿಯಿಂದ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಭಾವಿ ಅವರು ಬರೆಯುತ್ತಾರೆ- 'ಫೆ.18ರಂದು ಪುಟ 11ರಲ್ಲಿ ಕೆಳಗಡೆ 'ಫಲಪ್ರಭ'ದ ವರದಿಯಲ್ಲಿ, ಸಾರಿಗೆ ಸಂಸ್ಥೆ ಸಿಬ್ಬಂದಿ ಪಿಎಫ್ ಬಾಕಿ ಮಾರ್ಚ್ ಒಳಗೆ ಚುಕ್ತಾ ಇದರಡಿಯಲ್ಲಿ ಎರಡನೆಯ ಪ್ಯಾರಾದ ಮೊದಲಿಗೆ ಕಳೆದ ವರ್ಷ ಲೀಟಲ್ ಪೆಟ್ರೋಲ್‌ಗೆ ರು. 9 ಜಾಸ್ತಿ ಆಗಿದ್ದು, ಲಾಭದಲ್ಲೇ ಸಾಗುತ್ತಿದ್ದ ಇಲಾಖೆ, ಇದರಿಂದ ನಷ್ಟ ಅನುಭವಿಸುತ್ತಿದೆ. ಹಾಗಾಗಿ ಭವಿಷ್ಯನಿಧಿ ನೀಡಲು ಸಾಧ್ಯವಾಗಿಲ್ಲ ಎಂದು ಪ್ರಕಟವಾಗಿದೆ.'
'ಮೊದಲನೆಯದಾಗಿ ಸಾರಿಗೆ ಸಂಸ್ಥೆಯ ವಾಹನಗಳು ಓಡಾಡುವುದು ಪೆಟ್ರೋಲ್‌ನಿಂದ ಅಲ್ಲ. ಡೀಸೆಲ್‌ನಿಂದ. ಅದೂ ಲೀಟರ್ ಬದಲಿಗೆ ಲೀಟಲ್ ಎಂದು ಅಚ್ಚಾಗಿದ್ದು ಎರಡನೆಯ ತಪ್ಪು. ಇದರಲ್ಲಿನ ತಪ್ಪು ಒಪ್ಪುಗಳ ಖರ್ಚಿಗಿಂತ ತಮ್ಮ ಲೇಖನದ ಪ್ರಭಾವದಿಂದ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಪಿಎಫ್ ಬಾಕಿ ಚುಕ್ತಾ ಆಗಿದ್ದು ಅಭಿನಂದನೀಯ' ಎಂದಿದ್ದಾರೆ.
ಕೆಲವು ಬಾರಿ ಹಾಗೇ ಆಗುತ್ತದೆ. ಒಳ್ಳೆಯ ವರದಿ ಬರೆದಿರುತ್ತಾರೆ. ಪರಿಣಾವೂ ಚೆನ್ನಾಗಿರುತ್ತದೆ. ಆದರೆ ಅದರಲ್ಲಾಗಿರುವ ಒಂದೆರಡು ಕ್ಷುಲ್ಲಕ ತಪ್ಪುಗಳು ಸಂಪೂರ್ಣ ವರದಿಯ ಉತ್ತಮ ಗುಣಗಳನ್ನು ನುಂಗಿಹಾಕುತ್ತವೆ. ಅದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಆದರೆ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಭಾವಿ ಅವರು ವರದಿಯ ಉತ್ತಮ ಅಂಶಗಳನ್ನು ಮರೆಯದೇ ಪ್ರಸ್ತಾಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement