ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರೇಮದಿಂದ ಕೊಟ್ಟ ಸಿಹಿಮುತ್ತುಗಳ ಲೆಕ್ಕ ಇಡಬಾರದು ಅಲ್ವಾ?

Srinivasa Murthy VN
Updated On : 10 Mar 2014, 12:37 pm

ಫ್ಯಾಷನ್ ಡಿಸೈನರ್ ಮಧು, 99457-37427
ಪ್ರೇಮದಿಂದ ಕೊಟ್ಟ ಸಿಹಿಮುತ್ತುಗಳ ಲೆಕ್ಕ ಇಡಬಾರದು ಅಲ್ವಾ?
ಲೆಕ್ಕ ಇಟ್ಟು ಮಾಡಿ ಏಳೋಕೆ ಅದೇನು ದೇವರ ಜಪವಾ?

ತಲವಾಟ ಮಂಜುನಾಥ, ಸಾಗರ 9480931611
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ? ಅದೇ ಪ್ರೇಮಿಗಳ ಜಗಳ?
ಎಲ್ಲರೂ ಮಲಗಿದ್ದಾರೆಂದು ಖಾತ್ರಿಪಡಿಸಿಕೊಂಡು ನಂತರ ಕರೆನ್ಸಿ ಮುಗಿಯುವ ತನಕ.

ಎಂ. ಬಿ. ಕೃಷ್ಣಮೂರ್ತಿ 9449130531
ಹೆಣ್ಣಿನ ಕೆನ್ನೆ ಕಮಲದ ಹೂವಿನಂತೆ, ತುಟಿಯು ತೊಂಡೆ ಹಣ್ಣಿನಂತೆ ಎನ್ನುವಂತೆ, ಗಂಡಿನದು?
ಆತನಿಗೆ ಊಟ ಸವಿಯುವುದಷ್ಟೇ ಚಿಂತೆ!

ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಹೆಂಡತಿಯ ಅವಶ್ಯವಿರುವುದು ತಾರುಣ್ಯದಲ್ಲೋ ಮುಪ್ಪಿನಲ್ಲೋ?
ಬೇರೆ ಬೇರೆ ಕಾರಣಗಳಿಗೆ ಆಕೆ ಎಲ್ಲ ಹಂತದಲ್ಲಿ ಆಗಾಗ ಬೇಕಾಗುತ್ತಾಳೆಂಬುದು ಅನುಭವ ಉಳ್ಳವರ ಮಾತು.

ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ
ಹೆಣ್ಣಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಡುವ ಹೆಣ್ಣುಗಳು ಗಂಡಿಗೆ ಅನ್ಯಾಯವಾದಾಗ ಮೌನವಾಗಿರುತ್ತಾರಲ್ಲ?
ಆ ಕೆಲಸವನ್ನೂ ನಾವೇ ಮಾಡಿಕೊಡಬೇಕೆ ಅನ್ನೋದು ಅವರ ಪ್ರಶ್ನೆ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement