ದೇವರು ಹೆಣ್ಣಿಗೆ ಸೌಂದರ್ಯ ಕೊಟ್ಟ. ಗಂಡಿಗೆ?
ಮಹೇಶ್ ಸಾನಬಾಳ, ಮಸ್ಕಿ
ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ಶಾದಿಭಾಗ್ಯ ಇವುಗಳಿಂದ ನಮಗೆ ನಿಜವಾಗಿಯೂ ನಮಗೆ ಭಾಗ್ಯ ಬಂದಿದೆಯೇ?
ನಿಮಗೆ ಬಿಡಿ, ಕಾಂಗ್ರೆಸ್ ಮತ ಭಾಗ್ಯ ಬಂದಿದೆಯೋ ಇಲ್ಲವೋ ಎಂಬುದು ಮುಖ್ಯ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ದೇವರು ಹೆಣ್ಣಿಗೆ ಸೌಂದರ್ಯ ಕೊಟ್ಟ. ಗಂಡಿಗೆ?
ಆ ಸೌಂದರ್ಯದ ಬಗ್ಗೆ ಆಸೆಕೊಟ್ಟ!
ಶಂಕರನಾರಾಯಣ ಭಟ್, 9632821920
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಪಾರ್ಕ್ ವಾಕಿಂಗ್ ಕೂಡ ಹೆಚ್ಚಾಗುತ್ತಿದೆಯಂತೆ?
ಬೆಳಗ್ಗೆ ವಾಕಿಂಗ್ ಬರುವವರಿಗೆ ಮುಖ ತೋರಿಸಿ ಮತ ಗಿಟ್ಟಿಸಲು.
ಜಗದೀಶ ಎಸ್. ಬೆಳಗಾವಿ, 8722444410
ಬೆಳಗ್ಗೆ ಎದ್ದಕೂಡಲೇ ಜನರು ಸುಪ್ರಭಾತ ಹಾಡಿ ದೇವರನ್ನು ಎಬ್ಬಿಸುವುದೇಕೆ?
ನಾವು ಎದ್ದ ಮೇಲೆ ಬೇರೆಯವರು ಮಲಗಿರುವುದನ್ನು ಸಹಿಸಲಾಗದೆ!
ಹೇಮಂತಕುಮಾರ 9035992900
ಮರೆಯುವುದಕ್ಕೂ ಮೈ ಮರೆಯುವುದಕ್ಕೂ ವ್ಯತ್ಯಾಸವೇನು?
ಕಾಲ್ ಮಾಡಲು ಮರೆಯುವುದಕ್ಕೂ ಮೊಬೈಲನ್ನು ಮರೆಯವುದಕ್ಕೂ ಇರುವಷ್ಟೇ ವ್ಯತ್ಯಾಸ.
ಬಾಣಭಟ್ಟ