ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೆಸರಿನಲ್ಲಿ ಹುಟ್ಟಿರುವ ಕಮಲಕ್ಕೂ ಕೆಸರಾಗಿರುವ ಕೈಗೂ ವ್ಯತ್ಯಾಸವೇನು?

Srinivasa Murthy VN
Updated On : 15 Mar 2014, 12:51 pm

ಶ್ರೀಧರ ಡಿ. ರಾಮಚಂದ್ರ, ತುರವನೂರು, ಚಿತ್ರದುರ್ಗ
ಈಗಿನ ಕಾಲದ ಹುಡುಗೀರು ಯಾವಾಗಲೂ ಫೋನ್‌ನಲ್ಲೇ ಮಾತನಾಡುತ್ತಿರುತ್ತಾರಲ್ಲಾ?
ಅವರು ಹುಡುಗರ ಜತೆಯೇ ಮಾತನಾಡುತ್ತಿರುತ್ತಾರೆ!

ಆರೀಫ್ (ಅರಿ) ದಾವಣಗೆರೆ, 9964280609
ಹುಡುಗಿಯರು ಯೌವ್ವನಕ್ಕೆ ಕಾಲಿಡುವ ಮೊದಲೇ ಪ್ರೀತೀಲಿ ಬೀಳುವುದೇಕೆ?
ಬೀಳ್ಸೋದಕ್ಕೆ ಜನ ಕಾಯ್ತಾಇರ್ತಾರಲ್ಲ ಅದಕ್ಕೆ.

ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಕೆಲ ಮಹಿಳಾ ಮಣಿಗಳು ಸ್ನಾನದ ಕೋಣೆಗೆ ಟವಲ್ಲನ್ನು ಒಯ್ಯದೇ ಉದ್ದೇಶಪೂರ್ವಕವಾಗಿ ಮರೆತು ಹೋಗಲು ಕಾರಣವೇನು?
ನಿನ್ನಂತಹ ಪಡ್ಡೆಗೆ ಪುಳಕವಾಗಲಿ ಎಂದು!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಕೆಸರಿನಲ್ಲಿ ಹುಟ್ಟಿರುವ ಕಮಲಕ್ಕೂ ಕೆಸರಾಗಿರುವ ಕೈಗೂ ವ್ಯತ್ಯಾಸವೇನು?
ಬಾಯಿ ಮೊಸರಾಗುತ್ತೆ ಅಂತ ಕೈ ಕೆಸರು ಮಾಡ್ಕೊಂಡಿದ್ದು ಅಂದ್ರಂತೆ ಕಾಂಗ್ರೆಸ್ಸಿಗರು!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಎಲ್ಲ ದೇವರನ್ನು ಪ್ರೀತಿಸಿದ ಹಾಗೆ ಬ್ರಹ್ಮ ದೇವರನ್ನೇಕೆ ಪೂಜಿಸುವುದಿಲ್ಲ?
ಅದು ಬಹ್ಮನ ಹಣೆಬರಹ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement