ತಪ್ಪಾಯ್ತು ತಿದ್ಕೋತೀವಿ
ಗೌರಿಬಿದನೂರಿನಿಂದ ರವೀಂದ್ರನಾಥ್ ಬರೆಯುತ್ತಾರೆ- '27.04.14ರ ಕ.ಪ್ರ.ದ ಮುಖಪುಟದಲ್ಲಿ ಪ್ರಕಟವಾದ ಹನಿಸುದ್ದಿಯ '26 ಕೆ.ಜಿ. ಚಿನ್ನಕ್ಕೆ ಕನ್ನ ಎಂಬ ಸುದ್ದಿಯಲ್ಲಿ -ಅಕ್ಕಸಾಲಿಗನಿಂದ ಈ ಮಾಹಿತಿ ಎಂದಿದೆ. ಇದರ ಬದಲು ಅಕ್ಕಸಾಲಿಗನಿಂದ ಈ ಮಾಹಿತಿ ಬಹಿರಂಗಗೊಂಡಿದೆ ಎಂದಿರಬೇಕು. 2ನೇ ಪುಟದಲ್ಲಿ ಕೋಲಾರ ವಿಭಾಗದಲ್ಲಿ ಪ್ರಕಟವಾದ 20 ನಿಮಿಷ: 20 ಸುದ್ದಿ ವಿಭಾಗದ 2ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕಾರ್ಯಾಗಾರದಲ್ಲಿ 6ನೇ ಸಾಲಿನಲ್ಲಿ ಸರ್ಕಾರಿ ಪದವಿ ಪೂರ್ವ ಎಂದಿದೆ. ಇದರ ಬದಲು ಸರ್ಕಾರಿ ಪದವಿ ಪೂರ್ವ ಎಂದಿರಬೇಕು. ಇದೇ ವಿಭಾಗದ ನಿವೃತ್ತ ಶಿಕ್ಷಕನಿಗೆ ಬೀಳ್ಕೊಡುಗೆ ಬರಹದ 3ನೆಯ ಸಾಲಿನಲ್ಲಿ ಆರ್. ಲಕ್ಷ್ಮೀನಾರಾಯಣ್‌ನ್ನು ಸನ್ಮಾನಿಸಲಾಯಿತು ಎಂದಿದೆ. ಇದರ ಬದಲು ಆರ್. ಲಕ್ಷ್ಮೀನಾರಾಯಣರವರನ್ನು ಸನ್ಮಾನಿಸಲಾಯಿತು ಎಂದಿರಬೇಕು. ಇದೇ ಶೀರ್ಷಿಕೆಯ 12ನೇ ಸಾಲಿನಲ್ಲಿ ಮೇ 3 ಮಾಂಗಲ್ಯ ಸರ ಕಿತ್ತು ಪರಾರಿಯಾದ ದರೋಡೆಕೋರರು ಎಂದಿದೆ. ಇದರರ್ಥ ನಂಗಂತೂ ಗೊತ್ತಾಗುತ್ತಿಲ್ಲ! ಈ ವಾಕ್ಯಗಳನ್ನು ಮೇ 3 ಹೇಗೆ ಬರುತ್ತದೆ.
ಇದೇ ವಿಭಾಗದ 9ರಲ್ಲಿ ಪೋತನ ಭಾಗವತ ಕೃತಿಯ ಲೋಕಾರ್ಪಣೆ ಎಂಬ ಬರಹದ ಮೊದಲನೇ ಸಾಲಿನ ಮಹತ್ವದ ಪ್ರಕಟಣೆಯಾದ ಎಂದಿದೆ. ಇದರ ಬದಲು ಈ ವಾಕ್ಯವು ಮಹತ್ವದ ಅಥವಾ ಮಹತ್ತರವಾದ ಎಂದಿರಬೇಕು ಹಾಗೂ 10ನೇ ಸಾಲಿನಲ್ಲಿ ಬ್ರಹ್ಮರ್ಷಿ ಚಾಗಂಟಿ ಕೋಟೇಶ್ವರರಾವ್‌ಗಾರು ಎಂದಿದೆ. ಇಲ್ಲಿ ಬ್ರಹ್ಮರ್ಷಿ ಚಾಗಂಟಿ ಕೋಟೇಶ್ವರರಾವ್ ಎಂದಿರಬೇಕು. 14ರಲ್ಲಿ ನಾಳೆ ಪೋತನ ಭಾಗವತ ಸಂಪುಟ ಬಿಡುಗಡೆಯ 9ನೆಯ ಸಾಲಿನಲ್ಲಿ ಡಾ. ಆರ್ವಿಯಸ್ ಸುಂದರಂ ಎಂದಿದೆ. ಇಲ್ಲಿ ಸುಂದರಂ ಎಂದಿರಬೇಕು.
19ರಲ್ಲಿ ಬೇಸಿಗೆ ಶಿಬಿರಗಳಿಂದ ಮಾನಸಿಕ ಬೆಳವಣಿಗೆ ಸಾಧ್ಯ ಎಂಬ ಬರಹದಲ್ಲಿ ರಜಾ ದಿನಗಳಲ್ಲಿ ಹಮ್ಮಿಕೊಳ್ಳುತ್ತಿರುವ ಎಂದಿರಬೇಕಲ್ಲವೇ?
ಇದೇ ಕೋಲಾರ ವಿಭಾಗದ 3ನೇ ಪುಟದಲ್ಲಿ ಪ್ರಕಟವಾದ ತಾಯಿ, ಮಗಳು ಆತ್ಮಹತ್ಯೆ ಯತ್ನ ಬರಹದಲ್ಲಿನ ರಾಧಾಕೃಷ್ಣ ಕೊಲೆ ಆರೋಪಿ ಮನೆ ಧ್ವಂಸ ಎಂಬ ಒಳಲೇಖನದಲ್ಲಿ 2ನೇ ಪ್ಯಾರಾದ 3ನೇ ಸಾಲಿನಲ್ಲಿ ಕೊಲೆ ಮಾಡಿದ್ದು ಇದಕ್ಕೆ ಪ್ರತೀಕಾರವಾಗಿ ಎಂದಿದೆ. ಇದರ ಬದಲು ಕೊಲೆ ಮಾಡಿದ್ದು ಇದಕ್ಕೆ ಪ್ರತೀಕಾರ ತೀರಿಸಲು ಎಂದಿದ್ದರೆ ಚೆನ್ನಾಗಿತ್ತು.
ಇದೇ ಪುಟದ ಗುಣಾತ್ಮಕ ಶಿಕ್ಷಣ ಅತ್ಯವಶ್ಯಕ ಲೇಖನದಲ್ಲಿ ಕೊನೆಯ ಪ್ಯಾರಾದಲ್ಲಿ ಪ್ರೊ. ಸಿ. ಮದನ್‌ಗೋಪಾಲ್ ... ಜಿ.ಕೆ. ಸುಮಂಗಲ ಇದ್ದರು ಎಂದಿದೆ. ಈ ಹೆಸರುಗಳು ಪ್ರೊ. ಸಿ. ಮದನ್‌ಗೋಪಾಲ್, ಜಿ.ಕೆ. ಸುಮಂಗಳ ಎಂದಿರಬೇಕು.
ಇದೇ ಪುಟದ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ ಎಂಬ ಬರಹದಲ್ಲಿ 2ನೇ ಪ್ಯಾರಾದ 3ನೇ ಸಾಲಿನಲ್ಲಿ ಮನೆಯಲ್ಲಿ ಸಾಗುವ ಎಂದಿದೆ. ಇದರ ಬದಲು ಮನೆಯಲ್ಲಿ ಸಾಕುವ ಎಂದಿರಬೇಕು. 4ನೇ ಪ್ಯಾರಾದ 7ನೇ ಸಾಲಿನಲ್ಲಿ ಆರ್ಥ್ಥಿಕಾ ಭಿವೃದ್ಧಿಗೆ ದಾರಿ ಎಂದಿದೆ. ಇದರ ಬದಲು ಆರ್ಥಿಕಾಭಿವೃದ್ಧಿಗೆ ದಾರಿ ಎಂದಿರಬೇಕು' ಎಂದಿದ್ದಾರೆ.
-ವಿಶ್ವೇಶ್ವರಭಟ್