ದೂರ
= ದೂರಲೊಂದು ಕಾರಣ
= ಕೆಲವು ಸಮಸ್ಯೆ ತಲೆದೋರುವುದು ಇದೇ ಕಾರಣದಿಂದ
= ದಾರಾ ತುಂಬ ದಿನ ತವರಿನಲ್ಲಿದ್ದರೆ 'ರಾರಾ' ಎನ್ನಲು ಪತಿಗಿರುವ ನೆಪ
= ಇದೊಂದು ಸಾಪೇಕ್ಷ. ಯಾವ ಆಲಂನೆಯನ್ನಿಟ್ಟು ಹೇಳುತ್ತೆವೆಂಬುದು ಮುಖ್ಯ
= 'ಸ್ವಲ್ಪ ಹತ್ತಿರ' ಎನ್ನುವುದು ತುಂಬಾ ಹತ್ತಿರಕ್ಕಿಂತ ಸ್ವಲ್ಪ ದೂರವೇ
= ದೂರವೂ ಹತ್ತಿರವೆನಿಸುತ್ತದೆ, ಇಂಟರ್ನೆಟ್ ಸಂಪರ್ಕವಿದ್ದರೆ
= ಹತ್ತಿರವೂ ದೂರವೆನಿಸುತ್ತದೆ ಸಾರಿಗೆ ಸಂಪರ್ಕವಿಲ್ಲದಿದ್ದರೆ
= ಪೆಟ್ರೋಲ್ ರೇಟ್ ಜಾಸ್ತಿಯಾದ ಹಾಗೆಲ್ಲ ಪ್ರಪಂಚ ದೂರವೇ ಆಗುತ್ತಿದೆ
= ವಿಳಂಬಕ್ಕೆ ಕೊಡಬಹುದಾದ ಕುಂಟುನೆಪ
= ಅಹಮ್ಮಿನ ಕೋಟೆ ಕಟ್ಟಿಕೊಂಡರೆ ಸಂಬಂಧಗಳ ವಿಷಯದಲ್ಲಿ ಆಗುವ ಪರಿಣಾಮ
= ದುರತ್ಯಯವಾದದ್ದು
= ಭಕ್ತಿಯಿಲ್ಲದವಗೆ ವೈಕುಂಠ ದೂರ, ಪರಿಣತಿಯಿಲ್ಲದೇ ವಾಹನ ಚಲಾಯಿಸುವವಗೆ ಹತ್ತಿರ
= ದಾರಿಗೆ ಸಂಬಂಧಿಸಿದ್ದು
= ದುಷ್ಟರಿಂದ ದೂರವಿರದಿದ್ದರೆ ದುರಾಚಾರದಿಂದಲೂ ದೂರವುಳಿಯುವ ಮಾತು ದೂರವೇ ಉಳಿಯಿತು
= ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣಲು ಕಾರಣವಾದದ್ದು
ವಿಶ್ವನಾಥ ಸುಂಕಸಾಳ
vishwasunkasal@yahoo.com