ಬಳ್ಳಾರಿ: ಒಎಂಸಿ ಕಚೇರಿ ಎದುರಿಗಿರುವ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಕಟ್ಟಡದಲ್ಲಿ ಕಿಟಿಕಿ ಮುರಿದು ಒಳ ನುಗ್ಗಿರುವ ಕಳ್ಳರು 4 ಎಲ್‌ಸಿಡಿ ಟಿವಿ, ಒಂದು ಪ್ರಿಂಟರ್ ಸೇರಿ 4.29 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಗರದ ವೀರನಗೌಡ ಕಾಲೋನಿಯಲ್ಲಿ ನಡೆದಿದೆ. ಬುಧವಾರ ಬೆಳಗಿನ ಜಾವ ಕಳ್ಳರು ಮನೆಯ ಕಿಟಿಕಿ ಮುರಿದು 4 ಎಲ್‌ಸಿಡಿ ಟಿವಿ, ಒಂದು ಪ್ರಿಂಟರ್, ಒಂದು ಸ್ಟವ್ ಕದ್ದಿದ್ದಾರೆ.