ಬೆಂಗಳೂರು: ರಾಜ್ಯದಲ್ಲಿ ತಟಸ್ಥ ಮತದಾರರು ಇದೇ ಪ್ರಥಮ ಬಾರಿಗೆ ತಮ್ಮದೇ ಛಾಪು ಮೂಡಿಸಿದ್ದಾರೆ.
ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳೂ ಬೇಡ ಎಂದು ಶೇ.0.4ರಷ್ಟು ಮಂದಿ ಮತಯಂತ್ರದಲ್ಲಿ ನೊಟಾ ಗುಂಡಿ ಒತ್ತುವ ಮೂಲಕ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ ಮತ ಗಳಿಕೆ ಪಾಲು ಶೇ.42.6 ರಷ್ಟಿದ್ದರೆ, ನೋಟಾ ಚಲಾಯಿಸಿದವರು ಶೇ.08 ರಷ್ಟಿದ್ದಾರೆ. ವಿಶೇಷವೆಂದರೆ, ಇದಕ್ಕಿಂತಲೂ ಕಡಿಮೆ ಮತದಾರರು ರಾಷ್ಟ್ರೀಯ ಪಕ್ಷ ಆಮ್ ಆದ್ಮಿಗೆ ಮತ ಚಲಾಯಿಸಿದ್ದಾರೆ.
ರಾಜ್ಯದಲ್ಲಿ ನೋಟಾ ಮತದಾರರ ಹೆಚ್ಚು ಸದ್ದು ಮಾಡಿರುವುದು ಉತ್ತರ ಕನ್ನಡ, ಚಾಮರಾಜನಗರ ಧಾರವಾಡ, ರಾಯಚೂರು, ಬೆಂಗಳೂರು ಉತ್ತರ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ.
ಅದರಲ್ಲೂ ಉತ್ತರ ಕನ್ನಡದಲ್ಲಿ 16,000ಕ್ಕೂ ಹೆಚ್ಚಿನ ಮತದಾರರ ನೋಟಾ ಚಲಾಯಿಸಿ ದಾಖಲೆ ನಿರ್ಮಿನಿಸಿದ್ದಾರೆ. ಉಳಿದಂತೆ ಬೀದರ್ (1,968) ಹಾಗೂ ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ನೋಟಾ ಮತ ಚಲಾವಣೆಯಾಗಿವೆ.
ರಾಜ್ಯದಲ್ಲಿ ಪಕ್ಷಗಳು ಹಂಚಿಕೊಂಡಿರುವ ಮತಗಳನ್ನು ಗಮನಿಸಿದರೆ ಬಿಜೆಪಿ ಶೇ.42.6 ರಷ್ಟು ಮತಗಳಿಸಿ ಪ್ರಥಮ ಸ್ಥಾನದಲ್ಲಿದೆ. ಅದೇರೀತಿ ನೊಟ ಶೇ.08 ರಷ್ಟು ಮತ ಪಾಲುದಾರಿಕೆ ಪಡೆದು 6ನೇ ಸ್ಥಾನ ಪಡೆದಿದೆ. ಅಷ್ಟೇ ಏಕೆ ನೊಟಾ ರಾಜ್ಯದಲ್ಲಿ ಎನ್‌ಸಿಪಿ ಸೇರಿ ಇತರ ಪಕ್ಷಗಳಿಗಿಂತಲೂ ಹೆಚ್ಚು ಸಾಧನೆ ಮಾಡಿದೆ.
ಆಶ್ಚರ್ಯವೆಂದರೆ, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಮತ ಪಾಲುದಾರಿಕೆಗಿಂದಲೂ ನೊಟಾ ಸಾಧನೆಯೇ ಕೊಂಚ ಜಾಸ್ತಿ ಇದೆ.
ಆದರೆ ಇದೇ ಪ್ರಥಮಬಾರಿಗೆ ಅವಕಾಶ ನೀಡಿದ್ದರಿಂದ ನೊಟಾ ಮತಗಳು ಯಾವುದೇ ಅಭ್ಯರ್ಥಿಯನ್ನು ಸೋಲಿಸುಷ್ಟು ಕೆಲಸ ಮಾಡಿಲ್ಲ.
ಜಿಲ್ಲೆಗಳಲ್ಲಿ ಮತಗಳ ನೊಟಾ
ಜಿಲ್ಲೆಗಳು ನೊಟಾ ಮತಗಳು
ಬಾಗಲಕೋಟೆ 10,764
ಬೆಂ. ಕೇಂದ್ರ 7,721
ಬೆಂ. ಉತ್ತರ 11,996
ಬೆಂ.ಗ್ರಾಮಾಂತರ 8,892
ಬೆಂಗಳೂರು ದಕ್ಷಿಣ 3,281
ಬೆಳಗಾವಿ 11,500
ಬಳ್ಳಾರಿ 11,320
ಬೀದರ್ 1,968
ಬಿಜಾಪುರ 8,279
ಚಾಮರಾಜನಗರ 12,697
ಚಿಕ್ಕಬಳ್ಳಾಪುರ 7,676
ಚಿಕ್ಕೋಡಿ 10,169
ಚಿತ್ರದುರ್ಗ 8,895
ದಕ್ಷಿಣ ಕನ್ನಡ 7,109
ದಾವಣಗೆರೆ 4,434
ಧಾರವಾಡ 12,937
ಗುಲ್ಬರ್ಗಾ 9,888
ಹಾಸನ 7,334
ಹಾವೇರಿ 3,616
ಕೋಲಾರ 5,098
ಕೊಪ್ಪಳ 9,059
ಮಂಡ್ಯ 5,798
ಮೈಸೂರು 8,924
ರಾಯಚೂರು 13,170
ಶಿವಮೊಗ್ಗ 7,061
ತುಮಕೂರು 12,934
ಉಡುಪಿ-ಚಿಕ್ಕಮಗಳೂರು 7,828
ಉತ್ತರ ಕನ್ನಡ 16,277