ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಹಾಗೂ ಸ್ವಲ್ಪ ಕೇಸರಿ, ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಇದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸ್ವಲ್ಪಗಟ್ಟಿಯಿರುವಂತೆ ಕಲಸಿಕೊಳ್ಳಬೇಕು.ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ತುಪ್ಪವನ್ನು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ತುಪ್ಪಕಾದ ನಂತರ ಇದಕ್ಕೆ ಸಣ್ಣ ಸಣ್ಣ ತೂತುಗಳಿರುವ ಜಾಲರಿಯಲ್ಲಿ ಹಾಕಿ ಬಾಣಲೆಗೆ ಹಾಕಬೇಕು.
ಇದುಚಿನ್ನದ ಬಣ್ಣ ಬರುತ್ತಿದ್ದಂತೆ ತೆಗೆದು ಮತ್ತೊಂದು ಪಾತ್ರೆಯೊಂದಕ್ಕೆ ಹಾಕಿಕೊಳ್ಳಬೇಕು.ಮತ್ತೊಂದು ಪಾತ್ರೆಯೊಂದನ್ನು ತೆಗೆದುಕೊಂಡು ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಒಂದೆಳೆ ಪಾಕಮಾಡಿಕೊಳ್ಳಬೇಕು. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಪಾಕ ತಣ್ಣಗಾಗಲು ಬಿಡಬೇಕು.
ಕರಿದುಕೊಂಡ ಬೂಂದಿಗೆ ಪಿಸ್ತಾ, ಗೋಡಂಬಿಯನ್ನು ಹಾಕಿ ಮಿಶ್ರಣಮಾಡಿಕೊಳ್ಳಬೇಕು. ಇದಕ್ಕೆ ಸಕ್ಕರೆ ಪಾಕವನ್ನು ಹಾಕಿ ಮಿಶ್ರಣ ಮಾಡಿ 15 ನಿಮಿಷ ನೆನೆಯಲುಬಿಡಬೇಕು. ಚೆನ್ನಾಗಿ ನೆಂದ ಮೋತಿ ಚೂರುಗಳನ್ನು ಕೈಗೆ ತುಪ್ಪ ಸವರಿಕೊಂಡು ಸಣ್ಣ ಸಣ್ಣಉಂಡೆಗಳನ್ನಾಗಿ ಮಾಡಿದರೆ ರುಚಿಕರ ಮೋತಿ ಚೂರು ಲಾಡು ಸವಿಯಲು ಸಿದ್ಧವಾಗುತ್ತದೆ.