ಟೂಟಿ ಫ್ರೂಟಿ ಬಿಸ್ಕೆಟ್ 
ಅಡುಗೆ

ಟೂಟಿ ಫ್ರೂಟಿ ಬಿಸ್ಕೆಟ್

ಟೂಟಿ ಫ್ರೂಟಿ ಬಿಸ್ಕೆಟ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಮೈದಾಹಿಟ್ಟು - 3 ಬಟ್ಟಲು
  • ಬಣ್ಣೆ - 185 ಗ್ರಾಂ
  • ಸಕ್ಕರೆ - 1 ಕಪ್
  • ಹಾಲಿನ ಪುಡಿ - ಅರ್ಧ ಬಟ್ಟಲು
  • ಕಸ್ಟರ್ಡ್ ಪುಡಿ - 1/4 ಬಟ್ಟಲು
  • ವೆನಿಲ್ಲಾ ಎಸೆನ್ಸ್ - 1 ಚಮಚ
  • ರೋಸ್ ವಾಟರ್ - 3 ಚಮಚ
  • ಟೂಟಿ ಫ್ರೂಟಿ - 100 ಗ್ರಾಂ

ಮಾಡುವ ವಿಧಾನ...

  • ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿಮಾಡಿಕೊಳ್ಳಬೇಕು.
  • ಬೆಣ್ಣೆಯನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ ಚೆನ್ನಾಗಿ ಬೀಟ್ಮಾಡಿಕೊಳ್ಳಬೇಕು.
  • ನಂತರ ಬೀಟ್ ಮಾಡಿದ ಬೆಣ್ಣೆಯನ್ನು ಸಕ್ಕರೆ ಪುಡಿಯೊಂದಿಗೆಸ್ವಲ್ಪ ಸ್ವಲ್ಪವೇ ಹಾಕಿ ಕ್ರೀಮ್ ನಂತೆ ಬೀಟ್ ಮಾಡಿಕೊಳ್ಳಬೇಕು.
  • ಇದಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ರೋಸ್ ವಾಟರ್ ಸೇರಿಸಿಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ನಂತರ ಕಸ್ಟರ್ಡ್ ಪುಡಿ ಮತ್ತು ಹಾಲಿನ ಪುಡಿ ಹಾಕಿ ಚೆನ್ನಾಗಿಮಿಶ್ರಣ ಮಾಡಿಕೊಳ್ಳಬೇಕು.
  • ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟನ್ನು ಸೇರಿಸಿಕೈಗೆ ಅಂಟದಂತೆ ಚಪಾತಿ ಹಿಟ್ಟಿನಂತೆ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಕೊನಗೆ ಟೂಟಿ ಫ್ರೂಟಿಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.
  • ಈ ಹಿಟ್ಟನ್ನು ಎರಡು ಸಮಭಾಗಗಳನ್ನಾಗಿ ಮಾಡಿಕೊಂಡು ಬಟರ್ ಪೇಪರ್ನಲ್ಲಿ ಸುತ್ತಿ ಅರ್ಥ ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  • ನಂತರ ಫ್ರಿಡ್ಜ್ ನಿಂದ ಹೊರತೆಗೆದು ಬಿಸ್ಕೆಟ್ ಆಕಾರದಲ್ಲಿಕತ್ತರಿಸಿಕೊಂಡು ಬೇಕಿಂಗ್ ಟ್ರೇಯಲ್ಲಿ ಒಂದರ ಪಕ್ಕ ಒಂದಕ್ಕೆ ಅಂಟಿಕೊಳ್ಳದಂತೆ ಜೋಡಿಸಿ ಓವನ್ನಲ್ಲಿ 175 ° ಸೆನಷ್ಟು ಹೀಟ್ ಮಾಡಿಕೊಂಡು 20 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು.
  • ಬೆಂದ ಬಿಸ್ಕೆಟ್ ಗಳನ್ನು ತಣ್ಣಗಾಗಲು ಬಿಟ್ಟು ಗಾಳಿಯಾಡದ ಡಬ್ಬಿಯಲ್ಲಿ ತುಂಬಿಟ್ಟುಕೊಂಡುಬೇಕಾದಾಗ ತಿನ್ನಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ