ಗುಲ್ಕನ್
ರುಚಿಕರ ಹಾಗೂ ಆರೋಗ್ಯಕರ ಗುಲ್ಕನ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಒಣಗಿದ ಗುಲಾಬಿ ದಳಗಳು - 500 ಗ್ರಾಂ
- ದ್ರಾಕ್ಷಿ - ಸ್ವಲ್ಪ
- ಗೋಡಂಬಿ - ಸ್ವಲ್ಪ
- ಬಾದಾಮಿ - ಸ್ವಲ್ಪ
- ಒಣ ಕರ್ಜೂರ - ಸ್ವಲ್ಪ
- ಒಣ ಅಂಜೂರ - ಸ್ವಲ್ಪ
- ಸಕ್ಕರೆ - 200 ಗ್ರಾಂ
- ನೀರು - ಅರ್ಧ ಬಟ್ಟಲು
ಮಾಡುವ ವಿಧಾನ...
- ಒಲೆಯ ಮೇಲೆ ಪಾತ್ರೆಯೊಂದನ್ನಿಟ್ಟು, ಪಾತ್ರೆಯಿಡಬೇಕು. ನಂತರ ಇದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಬೇಕು.
- ನೀರು ಕುದಿಯುತ್ತಿರುವಾಗ ಸಕ್ಕರೆ ಹಾಕಿ. ಸಕ್ಕರೆ ಗಟ್ಟಿಯಾಗುವವರೆಗೆ ಕುದಿಸಬೇಕು.
- ನಂತರ ಸಕ್ಕರೆ ಪಾಕ ತಣ್ಣಗಾಗಲು ಬಿಡಬೇಕು.
- ಇದಕ್ಕೆ ಕತ್ತರಿಸಿದ ಗುಲಾಬಿ ದಳಗಳು, ದ್ರಾಕ್ಷಿ, ಗೋಡಂಬಿ, ಬಾದಾಮಿ, ಅಂಜೂರ, ಕರ್ಜೂರ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಗುಲ್ಕನ್ ತಯಾರಾಗುತ್ತದೆ.
- ಗುಲ್ಕನ್ ತುಂಬಾ ಗಟ್ಟಿಯಾದಂತೆ ಒಂದು ಡಬ್ಬಿಯಲ್ಲಿ ಹಾಕಿಡಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.