ಹಲಸಿನ ಕಾಯಿ ಕಬಾಬ್
ರುಚಿಕರ ಹಲಸಿನ ಕಾಯಿ ಕಬಾಬ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಎಳೆ ಹಲಸಿನ ಕಾಯಿ - 1
- ತೊಗರಿ ಬೇಳೆ - ಅರ್ಧ ಬಟ್ಟಲು
- ಬೆಳ್ಳುಳ್ಳು - 6 ಎಸಳು
- ಚಕ್ಕೆ, ಲವಂಗ - ಸ್ವಲ್ಪ
- ಖಾರದ ಪುಡಿ - 1 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು
- ಶುಂಠಿ - ಸ್ವಲ್ಪ
- ಕತ್ತರಿಸಿದ ಈರುಳ್ಳು - ಸ್ವಲ್ಪ
- ಅರಿಶಿಣ - ಸ್ವಲ್ಪ
ಮಾಡುವ ವಿಧಾನ...
- ಹಲಸಿನ ಕಾಯಿಯ ಮೇಲಿರುವ ಸಿಪ್ಪೆಯನ್ನು ತೆಗೆಯೇಬೇಕು. ಒಳಗೆ ಸಿಕ್ಕಿದ ತಿರುಳನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.
- ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೇಳೆ ಹಾಗೂ ಕತ್ತರಿಸಿ ಹಲಸಿನ ಕಾಯಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
- ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 3-5 ನಿಮಿಷ ಬೇಯಿಸಬೇಕು. ನಂತರ ನೀರನ್ನು ಸೋಸಿಕೊಳ್ಳಬೇಕು.
- ಚೆನ್ನಾಗಿ ಬೆಂದ ಹಲಸಿನಕಾಯಿಗೆ ಶುಂಠಿ, ಬೆಳ್ಳುಳ್ಳಿ ಪೇಟ್, ಚಕ್ಕೆ, ಲವಂಗ ಹಾಕಿ ನೀರು ಹಾಕದಂತೆ ರುಬ್ಬಿಕೊಳ್ಳಬೇಕು.
- ಇದಕ್ಕೆ ಖಾರದ ಪುಡಿ, ಅರಿಶಿಣದ ಪುಡಿ ಹಾಗೂ ಕತ್ತರಿಸಿದ ಈರುಳ್ಳಿ ಹಾಗಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಹಾಗೂ ಸ್ವಲ್ಪ ಅಡುಗೆ ಸೋಡಾ, ನೀರು ಹಾಕೆ ಕಲಸಿಟ್ಟುಕೊಂಡಿರಬೇಕು.
- ಒಲೆಯ ಮೇಲೆ ಬಾಣಲೆಯೊಂದನ್ನಿಟ್ಟು ಎಣ್ಣೆಯನ್ನು ಚೆನ್ನಾಗಿ ಕಾಯಿಸಬೇಕು.
- ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಕಲಸಿಕೊಂಡ ಕಡಲೆಹಿಟ್ಟಿನೊಳಗೆ ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ಹಲಸಿನ ಕಾಯಿ ಕಬಾಬ್ ತಯಾರಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.