ಮಿಕ್ಲಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಏಲಕ್ಕಿ, ದಾಲ್ಚಿನ್ನಿ, ಲವಂಗ, ಗಸಗಸೆ, ಪುದೀನ ಸೊಪ್ಪು, ಕಾಳು ಮೆಣಸು, ಖಾರದ ಪುಡಿ, ಟೊಮೆಟೊ ಶುಂಠಿ ಹಾಕಿ ಚೆನ್ನಾಗಿ ರುಬ್ಬಿ ಕೊಳ್ಳಬೇಕು.
ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಪಾತ್ರೆ ಕಾದ ಮೇಲೆ ತುಪ್ಪ ಹಾಕಿ ಪಲಾವ್ ಎಲೆ ಹಾಗೂ ಸ್ವಲ್ಪ ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ಇದಕ್ಕೆ ತೊಳೆದ ಅಕ್ಕಿಯನ್ನು ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು. ಇದಕ್ಕೆ ರುಬ್ಬಿಕೊಂಡ ಮಸಾಲೆ, ಉಪ್ಪು, ಅಳತೆ ನೀರು, ಕತ್ತರಿಸಿಕೊಂಡ ಆಲೂಗಡ್ಡೆ ಹಾಕಿ ಕುಕ್ಕರ್ ನಲ್ಲಿ 3 ವಿಶಲ್ ಕೂಗಿಸಿ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಆಲೂ ಪಲಾವ್ ಸವಿಯಲು ಸಿದ್ಧವಾಗುತ್ತದೆ.