ಬೀಟ್ ರೂಟ್ ಹಲ್ವಾ
ಬೀಟ್ ರೂಟ್ ಹಲ್ವಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಬೀಟ್ ರೂಟ್ - 4
- ಹಾಲು - 2 ಬಟ್ಟಲು
- ಸಕ್ಕರೆ - ಅರ್ಧ ಬಟ್ಟಲು
- ಏಲಕ್ಕಿ ಪುಡಿ - 1 ಚಮಚ
- ತುಪ್ಪ - 3 ಚಮಚ
- ಗೋಡಂಬಿ - ಸ್ವಲ್ಪ
- ಒಣ ದ್ರಾಕ್ಷಿ - ಸ್ವಲ್ಪ
- ಬಾದಾಮಿ - ಸ್ವಲ್ಪ
- ಕೋವಾ - 100 ಗ್ರಾಂ
- ಹಾಲು - 1 ಬಟ್ಟಲು
ಮಾಡುವ ವಿಧಾನ...
- ಬೀಟ್ ರೂಟನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು.
- ಬಾಣಲೆಯೊಂದನ್ನು ತೆಗೆದುಕೊಂಡು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಬೇಕು. ನಂತರ ಇದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ತುರಿದುಕೊಂಡ ಬೀಟ್ ರೂಟ್'ನ್ನು ತುಪ್ಪದಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು.
- ಇದಕ್ಕೆ ಹಾಲು ಹಾಗೂ ಕೋವಾ ಹಾಕಿ ಕಡಿಮೆ ಹುರಿಯಲ್ಲಿ ಹುರಿದುಕೊಳ್ಳಬೇಕು.
- ನಂತರ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಕಡಿ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. ಇದಕ್ಕೆ ಹಾಲನ್ನು ಸೇರಿಸಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಬೇಕು. ಕೊನೆಯಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿದರೆ ರುಚಿಯಾದ ಬೀಟ್ ರೂಟ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.