ಪ್ಯಾನ್ ಕೇಕ್
ಪ್ಯಾನ್ ಕೇಕ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಹಾಲು- 1. 3/4 ಬಟ್ಟಲು
- ಮೊಟ್ಟೆ- 2
- ವೆನ್ನಿಲ್ಲಾ ಎಸೆನ್ಸ್ - 1 ಚಮಚ
- ಹಿಟ್ಟು - 2 ಬಟ್ಟಲು
- ಸಕ್ಕರೆ - 1/3 ಬಟ್ಟಲು
- ಬೆಣ್ಣೆ - 2 ಚಮಚ
- ಬೇಕಿಂಗ್ ಸೋಡಾ - ಅರ್ಧ ಚಮಚ
ಮಾಡುವ ವಿಧಾನ
- ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆಗಳನ್ನು ಒಡೆದು ರಹಾಕಿ ಚೆನ್ನಾಗಿ ಕಲಕಬೇಕು.
- ನಂತರ ಇದಕ್ಕೆ ಹಿಟ್ಟು ಹಾಲು, ವೆನ್ನಿಲ್ಲಾ ಎಸೆನ್ಸ್ ಹಾಗೂ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಮೈಕ್ರೋವೇವ್ ಓವೆನ್ ನಲ್ಲಿ ಇಡಬಹುದಾದ ಪಾತ್ರೆಯೊಂದರಲ್ಲಿ ಬೆಣ್ಣೆಯನ್ನು ಹಾಕಿ ಕರಗಿಸಿಕೊಳ್ಳಬೇಕು. ನಂತರ ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ಮಾಡಿ ಇದನ್ನು ಬಿಸಿ ಮಾಡಿಕೊಳ್ಳಬೇಕು.
- ಹುರಿಯುವ ಪಾತ್ರೆಗೆ ಈ ಮೊದಲೇ ಮಾಡಿಟ್ಟುಕೊಂಡ ಮಿಶ್ರಣವನ್ನು 1/4 ಪ್ರಮಾಣದಲ್ಲಿ ಸುರಿದು. 2 ನಿಮಿಷಗಳ ಕಾಲ ಬೇಯಲು ಬಿಡಬೇಕು. ಬಿಸಿಯಾಗುತ್ತಿರುವಾಗ ನೀರನ್ನು ಚಿಮುಕಿಸಿ ಹದ ನೋಡಬಹುದು. ಮಿಶ್ರಣದ ಮೇಲೆ ನೀರಿನ ಹನಿಗಳು ಕಾಣಿಸಿಕೊಂಡರೆ ಸಿದ್ಧವಾಗಿದೆಯೆಂದೇ ಅರ್ಥ. ನಂತರ ಮತ್ತೆ 1-2 ನಿಮಿಷಗಳ ಕಾಲ ಬೇಯಿಸಿ. ತಟ್ಟೆಯೊಂದನ್ನು ತೆಗೆದುಕೊಂಡು ಪ್ಯಾನ್ ಕೇಕ್ ನ್ನು ತೆಗೆದುಹಾಕಿದರೆ ಪ್ಯಾನ್ ಕೇಕ್ ತಯಾರಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.