ಆಂಧ್ರ ಶೈಲಿಯ ಟೊಮೆಟೊ ಪಪ್ಪು
ಆಂಧ್ರ ಶೈಲಿಯ ಟೊಮೆಟೊ ಪಪ್ಪು ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ತೊಗರಿಬೇಳೆ - 1 ಬಟ್ಟಲು
- ಈರುಳ್ಳಿ - 2
- ಶುಂಠಿ - ಸ್ವಲ್ಪ
- ಹಸಿಮೆಣಸಿನ ಕಾಯಿ - 3
- ಟೊಮೆಟೊ- 5
- ಅರಿಶಿಣದ ಪುಡಿ - ಸ್ವಲ್ಪ
- ಎಣ್ಣೆ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಒಣಗಿದ ಮೆಣಸಿಕಾಯಿ - 2
- ಸಾಸಿವೆ- ಸ್ವಲ್ಪ
- ಜೀರಿಗೆ - ಸ್ವಲ್ಪ
- ಬೆಳ್ಳುಳ್ಳಿ - 6-7
- ಇಂಗು - ಸ್ವಲ್ಪ
- ತುಪ್ಪ - ಸ್ವಲ್ಪ
- ಸಾಂಬಾರ್ ಪುಡಿ - 1 ಚಮಚ
ಮಾಡುವ ವಿಧಾನ...
- ಮೊದಲು ಕುಕ್ಕರ್ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಿಸಿಕಾಯಿ ಹಾಗೂ ಅರಿಶಿಣದ ಪುಡಿ, ಸಾಂಬಾರ್ ಪುಡಿ, ಕೊತ್ತಂಬರಿ ಸೊಪ್ಪು, ಟೊಮೆಟೋ. ಉಪ್ಪು, ನೀರುನ್ನು ಹಾಕಿ 3 ಕೂಗನ್ನು ಕೂಗಿಸಿಕೊಳ್ಳಬೇಕು. ನಂತರ ಇದನ್ನು ಇಳಿಸಿಕೊಂಡು ಮಸಿಯುವ ಕೋಲಿನಿಂದ ಚೆನ್ನಾಗಿ ನುಣ್ಣಗಾಗುವವರೆಗೆ ಮಸಿದುಕೊಳ್ಳಬೇಕು
- ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಸೊಪ್ಪು, ಒಣಗಿದ ಮೆಣಸಿನ ಕಾಯಿ, ಇಂಗು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನುಣ್ಣಗೆ ಮಾಡಿಕೊಂಡ ಬೇಳೆಯನ್ನು ಇದಕ್ಕೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಂಧ್ರ ಶೈಲಿಯ ಟೊಮೆಟೊ ಪಪ್ಪು ಸವಿಯಲು ಸಿದ್ಧವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.