ಸಿಹಿ ಖರ್ಜೂರ
ಸಿಹಿ ಖರ್ಜೂರ ಮಾಡುವ ವಿಧಾನ...
ಬೇಕಾದ ಪದಾರ್ಥಗಳು
- ಮೈದಾ ಹಿಟ್ಟು - 1 ಬಟ್ಟಲು
- ಸಕ್ಕರೆ ಪುಡಿ - 2 ಬಟ್ಟಲು
- ಹಾಲು -ಸ್ವಲ್ಪ
- ನೀರು - ಕಲಸಿಕೊಳ್ಳಲು ಬೇಕಾದಷ್ಟು
- ಏಲಕ್ಕಿ ಪುಡಿ - ಚಿಟಿಕೆ
- ತುಪ್ಪ - 1 ಚಮಚ
- ಎಣ್ಣೆ -ಕರಿಯಲು
ಮಾಡುವ ವಿಧಾನ...
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಸಕ್ಕರೆಪುಡಿ ಹಾಕಿ ಕಲಸಿಕೊಳ್ಳಬೇಕು.
- ನಂತರ ಏಲಕ್ಕಿ ಪುಡಿ, ತುಪ್ಪ ಹಾಗೂ ಸ್ವಲ್ಪ ನೀರು, ಹಾಲು ಹಾಕಿ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯೊಂದನ್ನು ಇಟ್ಟು, ಅದಕ್ಕೆ ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು.
- ಎಣ್ಣೆ ಕಾದ ನಂತರ ಕಲಸಿಕೊಂಡ ಹಿಟ್ಟನ್ನು ಬೇಕಾದ ಆಕಾರಕ್ಕೆ ಮಾಡಿಕೊಂಡು ಚಿನ್ನದ ಬಣ್ಣ ಬರುವವರೆಗೆ ಕರಿದರೆ ಸಿಹಿ ಖರ್ಜೂ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.